LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರೇಗುಡ್ದ ಶ್ರೀ ಮಹಾಂತೇಶ್ವರ ಮಠದಲ್ಲಿ ಅ.11 ರಿಂದ ಶ್ರೀದೇವಿ ಪುರಾಣ 

Advertisement

ಮಾನ್ವಿ: ತಾಲೂಕಿನ ಕರೇಗುಡ್ದ ಗ್ರಾಮದಲ್ಲಿನ ಶ್ರೀ ಮಹಾಂತೇಶ್ವರಮಠದಲ್ಲಿ ಪ್ರತಿ ವರ್ಷದಂತೆ ನಡೆಯುವ ದಸರಾ ಮಹೋತ್ಸವದ ಅಂಗವಾಗಿ ಶ್ರೀದೇವಿ ಪುರಾಣ ಕಾರ್ಯಕ್ರಮವನ್ನು ಅ.11 ರಂದು ಬೆಳಿಗ್ಗೆ 9ಕ್ಕೆ ಶ್ರೀ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲ್ಲಿದ್ದಾರೆ.ಅ.14 ರಂದು ಶ್ರೀಮಠದ ಲಿಂ.ಮಹಾಂತಪ್ಪ  ತಾತನವರ ಪುಣ್ಯಾರಾಧನೆ, ಅ.11 ರಿಂದ ಅ.23 ರವರೆಗೆ ಸಂಜೆ 7-30ರಿಂದ 9-30 ರವರೆಗೆ ನಂದವಾಡಿಗಿ ಮಹಾಂತೇಶ ಶಾಸ್ತ್ರೀಗಳು ಸರಗಣಚಾರಿ ರವರಿಂದ ಶ್ರೀದೇವಿ ಪುರಾಣ ನಡೆಯಲಿದೆ.  ಅ.23 ರಂದು ಶ್ರೀ ದೇವಿ ಪುರಾಣದ ಜೀವನಮುಕ್ತಿಯೊಂದಿಗೆ ಮಹಾಮಂಗಲ ಹಾಗೂ ಸಂಜೆ 5 ಕ್ಕೆ ಶ್ರೀಮಠದ ಅವರಣದಲ್ಲಿ ಸುಮಂಗಲಿಯರಿಂದ ಶ್ರೀದೇವಿಯ ಮಹಾರಥೋತ್ಸವ ಹಾಗೂ  ನ.27 ರಂದು ಸಂಜೆ 5ಕ್ಕೆ ಶ್ರೀ ಲಿಂ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥೋತ್ಸವ ನಡೆಯಲಿದ್ದು ಒಳಬಳ್ಳಾರಿ ಸುವರ್ಣಗಿರಿ ಮಠದ ಶ್ರೀ ಡಾ.ಸಿದ್ದಲಿಂಗ ಮಹಾಸ್ವಾಮಿಗಳು,ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಶ್ರೀ ಕೊಟ್ಟುರು  ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ರಾಜ್ಯದ ಸಚಿವರು.ಜನಪ್ರತಿನಿಧಿಗಳುಗಣ್ಯರು ಹಾಗೂ ಸುತ್ತ ಮುತ್ತಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರೇಗುಡ್ದ ಶ್ರೀ ಮಹಾಂತೇಶ್ವರಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ :ಆಂಜನೇಯ ನಸಲಾಪುರ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್ ನಾಳೆ ಜಿಪಂ-ತಾಪಂ ಚುನಾವಣೆ ಮೀಸಲಾತಿಯ ಪ್ರಾಥಮಿಕ ಅಧಿಸೂಚನೆ ಬಿಡುಗಡೆ : ಈಶ್ವರ್‌ ಖಂಡ್ರೆ ಸ್ಟಿಂಗ್ ಏಜೆನ್ಸಿಗಳ ಬಗ್ಗೆ ಸಿಎಂ ಸ್ಪಷ್ಟನೆ ನೀಡಲಿ: ಬಿ.ವೈ ವಿಜಯೇಂದ್ರ ಸಚಿವರ ಮೇಲೆ 'ಖಾಸಗಿ ಸ್ಟಿಂಗ್ ಆಪರೇಷನ್' ಬಲೆ: ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎಚ್ಚರಿಕೆದಸರಾ ಹಬ್ಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಆತ್ಮೀಯವಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆಮಂತ್ರಿಸಿದೆವಿದ್ಯಾರ್ಥಿಗಳು ಓದುವ ಮೂಲಕ ತಮ್ಮ ವ್ಯಕ್ತಿತ್ವವನ್ನು  ಬೆಳೆಸಿಕೊಳ್ಳಬೇಕು : ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ