Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿಜಬ್ ಗೆ ಅನುಮತಿ ವಿರೋಧಿಸಿ ಡಿಸಿ ಗೆ ಶ್ರೀರಾಮ ಸೇನೆ ಮನವಿ

Advertisement

ಕಲಾದಗಿ : ಶಾಲಾ ಸಮವಸ್ತ್ರ ವಿಚಾರವಾಗಿ 2022ರ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಹೊಸ ಆದೇಶ ಹೊರಡಿಸಿದೆ. ಹೊಸ ಆದೇಶದಲ್ಲಿ ಹಿಜಾಬ್ ಗೆ ಅವಕಾಶ ನೀಡಿರುವುದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ  ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಶಿಕ್ಷಣ ಸಂಸ್ಥೆಗಳಲ್ಲಿ ಈಜಾಬ್ ಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಶ್ರೀರಾಮ ಸೇನೆ ಕರ್ನಾಟಕ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ 2022ರಲ್ಲಿ ಕರ್ನಾಟಕ ಹೈಕೋರ್ಟ್ ಹಿಜಾಬ್ ಸಮವಸ್ತ್ರ ಅವಿಭಾಜ್ಯ ಭಾಗವಲ್ಲ ಎಂದು ತೀರ್ಪು ನೀಡಿದರು ಮತ್ತೆ ಅನುಮತಿ ನೀಡಲು ಮುಂದಾಗಿರುವುದು ನ್ಯಾಯಾಂಗದ ತೀರ್ಪಿನ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಶಾಲಾ - ಕಾಲೇಜುಗಳ ಸಮವಸ್ತ್ರ ಹಾಗೂ ಶಿಸ್ತು ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಅಲ್ಲಿನ ಎಸ್ ಡಿ ಎಂ ಸಿ ಹಾಗೂ ಇದಕ್ಕೆ ಸಂಬಂಧಿಸಿದೆ ಸಂಸ್ಥೆಗಳ ಸಮಿತಿಗಳಿಗೆ ಬಿಟ್ಟಿರುವ  ವಿಷಯ. ಆದರೆ ಕರ್ನಾಟಕ ಸರ್ಕಾರದ ನಿಲುವು ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಶ್ರೀರಾಮ ಸೇನೆ ಕರ್ನಾಟಕ ಕಾರ್ಯಕರ್ತರು ಆರೋಪಿಸಿದರು. ಶಾಲಾ ಸಮವಸ್ತ್ರದ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹಿಜಾಬ್, ಜನಿವಾರ, ಶಿವದಾರ, ರುದ್ರಾಕ್ಷಿ ಸೇರಿದಂತೆ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಆದರೆ ಕೇಸರಿ ಶಾಲು, ಸಿಂಧೂರ, ಕುಂಕುಮ, ತಿಲಕದ ವಿಚಾರವಾಗಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಇದು ಹಿಂದೂ ಸಂಘಟನೆಗಳು, ವಿಪಕ್ಷ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ಬಸವರಾಜ ಪೂಜಾರಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಜಬ್ ಗೆ ಅನುಮತಿ ವಿರೋಧಿಸಿ ಡಿಸಿ ಗೆ ಶ್ರೀರಾಮ ಸೇನೆ ಮನವಿಪಿಬಿಕೆಎಸ್ ವಿರುದ್ಧದ ಪಂದ್ಯಕ್ಕೆ ಬೂಮ್ರಾ ನಾಯಕಸಾಮಾನ್ಯರಿಗೆ  ಕಾನೂನಿನ ಉರುಳು, ಬಲಿಷ್ಠನಿಗೆ ಅಧಿಕಾರದ ನೆರಳು: ಇದು ವ್ಯವಸ್ಥೆಯ ಅಟ್ಟಹಾಸ!ಭಾರತ ಎ, ತಂಡದಲ್ಲಿ ವೈಭವ್ ಸೂರ್ಯವಂಶಿಹಿಜಾಬ್ ಧರಿಸಿ ಬಂದರೆ ಎಲ್ಲಾ‌ ಶಾಲಾ‌-ಕಾಲೇಜುಗಳು ಕೇಸರಿಮಯವಾಗುತ್ತವೆ : ಕೆ. ಎಸ್ ಈಶ್ವರಪ್ಪ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಉಮೇಶ್ ಮೇಟಿ - ಸಮರ್ಥ್ ಶಾಮನೂರುತಾಲೂಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ  ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಕ್ರಮಕ್ಕೆ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧಿಕಾರಿಗೆ ಮನವಿ ಗುರುಮಠಕಲ್ ಪಟ್ಟಣದಲ್ಲಿ ಇಂಧನ ಸಂಕಷ್ಟ: ಪೆಟ್ರೋಲ್-ಡೀಸೆಲ್ ಇಲ್ಲದೆ ವಾಹನ ಸವಾರರ ಪರದಾಟಮದ್ಯ ಖರೀದಿಗೆ ಕನಿಷ್ಠ 21 ವರ್ಷ ಕಡ್ಡಾಯ : ವಿಜಯ್ ಸರ್ಕಾರ ಅಧಿಕೃತ ಆದೇಶ