ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ವಾಹನಗಳ ಬಗ್ಗೆ ಇರುವ ಕ್ರೇಜ್ ಎಲ್ಲರಿಗೂ ಗೊತ್ತಿರೋದೇ. ಆದರೆ ಈಗ ಅವರ ಗ್ಯಾರೇಜ್ ಸೇರಿರುವ ಹೊಸ ವಾಹನ ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ ನಟ ಸುದೀಪ್ ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಐಷಾರಾಮಿ ಕ್ಯಾರವನ್ (Caravan) ಒಂದು ಸಿದ್ಧವಾಗಿ ಬಂದಿದ್ದು, ಸದ್ಯ ಸ್ಯಾಂಡಲ್‌ವುಡ್‌ನಲ್ಲೇ ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ರೆಡಿಯಾಗಿರುವ ಈ ಹೈ-ಫೈ ಕ್ಯಾರವನ್‌ನ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ ಭಾರತದ ಖ್ಯಾತ ಕಾರ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ ಮಾಲೀಕತ್ವದ 'DC2' ಸಂಸ್ಥೆಯು ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಿಕೊಟ್ಟಿದೆ. ಇದು ಬರೀ ಕ್ಯಾರವನ್ ಅಲ್ಲ, ಒಳಗಡೆ ಜಿಮ್ ಸೌಲಭ್ಯವನ್ನೂ ಒಳಗೊಂಡಿರುವ ಜಿಮ್ ಮಾಡ್ಯುಲರ್ ಕ್ಯಾರವನ್ ಆಗಿದೆ.
ಖಡಕ್ ಸಿಂಬಲ್: ಈ ಐಷಾರಾಮಿ ಕ್ಯಾರವನ್‌ನ ಮತ್ತೊಂದು ಹೈಲೈಟ್ ಅಂದರೆ, ಇದರ ಮುಂಭಾಗದಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ 'K' (ಕಿಚ್ಚ) ಎಂಬ ವಿಶೇಷ ಸಿಂಬಲ್ ಅನ್ನು ಡಿಸೈನ್ ಮಾಡಲಾಗಿದೆ.
ಸುದೀಪ್ ಅವರು ತಮ್ಮ ಕಾರುಗಳ ಮೇಲೂ ಇದೇ ರೀತಿಯ ಲೋಗೋ ಹೊಂದಿದ್ದು, ಈಗ ಕ್ಯಾರವನ್ ಮೇಲೂ ಅದೇ 'K' ಬ್ರ್ಯಾಂಡ್ ರಾರಾಜಿಸುತ್ತಿದೆ.


