LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಂಗಳೂರಲ್ಲಿ ದಿಢೀರ್ ವರುಣಾರ್ಭಟ: ವಾಹನ ಸವಾರರ ಪರದಾಟ 

Advertisement

ಬೆಂಗಳೂರು: ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಗುಡುಗು ಸಹಿತ ಭಾರಿ ಮಳೆ ಅಪ್ಪಳಿಸಿದ್ದು, ಇಡೀ ಸಿಲಿಕಾನ್ ಸಿಟಿ ಕ್ಷಣಾರ್ಧದಲ್ಲಿ ಅಕ್ಷರಶಃ ನಡುಗಿಹೋಗಿದೆ. 

ದಿಢೀರ್ ಸುರಿದ ಧಾರಾಕಾರ ಮಳೆಗೆ ರಾಜಧಾನಿಯ ಹಲವು ಬಡಾವಣೆಗಳು, ಅಂಡರ್‌ಪಾಸ್‌ಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿದಿದ್ದು, ಜನಜೀವನ ಸಂಪೂರ್ಣ ಏರುಪೇರಾಗಿದೆ.

ಉತ್ತರ ಮತ್ತು ಕೇಂದ್ರ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ವರುಣನ ಅಬ್ಬರ ಜೋರಾಗಿತ್ತು. ರಾಜಾಜಿನಗರ, ದಾಸರಹಳ್ಳಿ, ಗೊರಗುಂಟೆಪಾಳ್ಯ, 8ನೇ ಮೈಲಿ, ಶಿವಾಜಿನಗರ, ಕೆ.ಆರ್. ಪುರಂ, ಟಿ.ಸಿ. ಪಾಳ್ಯ, ಜಕ್ಕೂರು, ಗಾಂಧಿನಗರ ಹಾಗೂ ಎಂ.ಜಿ. ರಸ್ತೆಗಳಲ್ಲಿ ರಸ್ತೆಗಳು ಹೊಳೆಯಂತಾಗಿ ಮಾರ್ಪಟ್ಟವು.

 ಶೇಷಾದ್ರಿಪುರಂ ಮುಖ್ಯರಸ್ತೆ ಹಾಗೂ ಅಂಡರ್‌ಪಾಸ್‌ನಲ್ಲಿ ಮೊಣಕಾಲುದ್ದ ನೀರು ನಿಂತ ಪರಿಣಾಮ ವಾಹನಗಳು ಮುಳುಗಡೆಯಾಗುವ ಸ್ಥಿತಿ ನಿರ್ಮಾಣವಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಮುಂದೆ ಸಾಗಲಾರದೆ ಪರದಾಡಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST