ಬೆಂಗಳೂರು: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ (mudhol) ಹೋರಾಟ ( protest ) ಶುರುವಾಗಿದೆ.
ಪ್ರತಿ ಟನ್ ಕಬ್ಬಿಗೆ 4,250 ರೂ. ದರ ನೀಡಲೇ ಬೇಕು ಎಂದು ಆಗ್ರಹಿಸಿ, ಕಬ್ಬು ಬೆಳೆಗಾರರು ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಟನ್‌ಗೆ 4,250 ರೂ. ನೀಡುವಂತೆ ಆಗ್ರಹ!
4,250 ರೂ.ಗಳ ದರ ಪಡೆಯದೇ ನಾವು ವಾಪಸ್ ಹೋಗುವುದಿಲ್ಲ, ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಒಪ್ಪಂದಗಳನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ.
ಕಬ್ಬು ಬೆಲೆ ನಿಗದಿ ಒಂದು ಜಿಲ್ಲೆಗೆ ಸೀಮಿತವಾದ ವಿಷಯವಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಜಿಲ್ಲಾಧಿಕಾರಿಗಳ ಆದೇಶ ರಾಜ್ಯಾದ್ಯಂತ ಅನ್ವಯಗೊಳ್ಳುವುದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಆದೇಶ ಹೊರಡಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.
ಕಳೆದ ವರ್ಷ ಭರವಸೆ ನೀಡಲಾದ 300 ರೂಗಳನ್ನು ಈವರೆಗೂ ಪಾವತಿಸಿಲ್ಲ. ಅದನ್ನು ಬಿಡುಗಡೆ ಮಾಡಬೇಕು. ಬೆಳಗಾವಿಯಲ್ಲಾದ ಒಪ್ಪಂದದಲ್ಲಿ ಕೆಲವು ಲೋಪಗಳಾಗಿವೆ.
ಎಸ್‌ಎಪಿ, ಎಫ್‌ಆರ್‌ಪಿ, ಎಂಎಸ್‌ಪಿಗಳೆಂದರೇನು? ಅವುಗಳ ಕಾನೂನು ಮಿತಿಗಳ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಬ್ಬು ಬೆಳೆಗಾರರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.


