ಸಿಂಧನೂರು: ತಾಲೂಕಿನ ಜಾಲಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಹನುಮಾಪುರ ಗ್ರಾಮದ ಗಾಂವಠಾಣಾ ಒಟ್ಟು ಕ್ಷೇತ್ರ 5 ಎಕರೆಯಲ್ಲಿ 1 ಎಕರೆ ಜಮೀನು
ಒತ್ತುವರಿ ಮಾಡಿದ್ದಾರೆ, ಇದನ್ನು ತೆರವು ಮಾಡಬೇಕು ಎಂದು ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ಯುವ ಘಟಕದಿಂದ ಮನವಿ ಸಲ್ಲಿಸಿದ್ದು.ಆದರೆ ಅಧಿಕಾರಿಗಳು ಮಾತ್ರ ತೆರವು ಮಾಡದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ಯುವ ಘಟಕದ ತಾಲೂಕು ಅಧ್ಯಕ್ಷ ಸುರೇಶ್ ನಾಯಕ ಹೇಳಿದರು.
ಈ ಕುರಿತು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಒತ್ತುವರಿ ಮಾಡಿಕೊಂಡು ನಿರ್ಮಿಸಿದ ದನದ ಶೆಡ್. ತಿಪ್ಪೇ ಗುಂಡೆ. ಬಣವೆ. ಹಾಕಿಕೊಂಡ ಪರಿಣಾಮ ಆ ಪರಿಸರದಲ್ಲಿ ವಿಪರೀತ ಸೊಳ್ಳೆಗಳ ಕಾಟ ದುರ್ವಾಸನೆ ಸೇರಿದಂತೆ ಸಾಂಕ್ರಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗಿದೆ ಸರ್ಕಾರದ ಆದೇಶದ ಪ್ರಕಾರ ಇಂತಹ ಗಾoವಠಾಣಾ ಒತ್ತುವರಿಯಾಗಿದ್ದಲ್ಲಿ ಗ್ರಾಮ ಪಂಚಾಯಿತಿ ತೆರವುಗೊಳಿಸಿ ಹದ್ದುಬಸ್ತು ಮಾಡಿ ಅದರಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಶಾಲೆ,ಅಂಗನವಾಡಿ. ಸೇರಿದಂತೆ ವಿವಿಧ ಸರಕಾರಿ ಕಛೇರಿ ನಿರ್ಮಾಣ ಮಾಡುವಂತೆ ಮನವಿ ಮಾಡಿದೆ ಆದರೆ ಜಾಲಿಹಾಳ ಪಿ ಡಿ ಓ ಒತ್ತುವರೆ ಮಾಡಿದ ಸಾರ್ವಜನಿಕರಿಗೆ ನೋಟಿಸ್ ಜಾರಿ ಮಾಡಿದ್ದು ಬಿಟ್ಟರೆ ಯಾವುದೇ ಕ್ರಮ ಜರಗಿಸಿಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಳಗೊಂಡಂತೆ ಹಿತ ಶಕ್ತಿಗಳ ಅಮೀಶಕ್ಕೆ ಒಳಗಾಗಿ ತೆರವು ಮಾಡಲು ಮುಂದಾಗದೆ ಇರುವುದು ಅತ್ಯಂತ ಖಂಡನೀಯ ಕೂಡಲೇ ಒತ್ತುವರಿಯಾದ1 ಎಕರೆ ಭೂಮಿಯನ್ನು ತೆರವು ಮಾಡಬೇಕು ತಪ್ಪಿದರೆ ಹೋರಾಟ ಸ್ವರೂಪ ಬದಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ:ಬಸವರಾಜ ಬುಕ್ಕನಹಟ್ಟಿ

