LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವೈದ್ಯರ ನಿರ್ಲಕ್ಷ್ಯಕ್ಕೆ ಬ್ಯಾಂಕ್ ಉದ್ಯೋಗಿ ಅನುಮಾನಾಸ್ಪದ ಸಾವು

ಬೇರೆ ಯಾವುದೋ ರಕ್ತ ಕೊಟ್ಟು ಕೊಂದರಾ ವೈದ್ಯರು

Advertisement

ಬಾಗಲಕೋಟೆ : ವೈದ್ಯರ ನಿರ್ಲಕ್ಷ್ಯಕ್ಕೆ ಬ್ಯಾಂಕ್ ಉದ್ಯೋಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ  ಶಿಲ್ಪಾ, ಸಾವನ್ನಪ್ಪಿರೋ ಮಹಿಳಾ ಬ್ಯಾಂಕ್ ಉದ್ಯೋಗಿ.

ಏನಿದು ಪ್ರಕರಣ? 

ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಶಿಲ್ಪಾ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು  ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3 ರಂದು ನಗರದ ಮಿರ್ಜಿ ಆಸ್ಪತ್ರೆಗೆ ದಾಖಲಾಗಿದ್ದರು  ತಪಾಸಣೆ ನಡೆಸಿದ ವೈದ್ಯರು ರೋಗಿಗೆ ರಕ್ತ ಕಡಿಮೆ ಆಗಿದೆ ರಕ್ತವನ್ನು ಕೂಡಲೇ ನೀಡಬೇಕು ಎಂದು ತಿಳಿಸಿದ್ದಾರೆ.

ವೈದ್ಯರ ಸೂಚನೆಯಂತೆ ಶಿಲ್ಪಾ ಕುಟುಂಬಸ್ಥರೆಲ್ಲ ಸೇರಿ ರಕ್ತವನ್ನು ಹೊಂದಿಸಿ ಆಸ್ಪತ್ರೆಗೆ ತಂದುಕೊಟ್ಟಿದ್ದಾರೆ  ಮೊದಲ ಬಾರಿ ಶಿಲ್ಪಾಗೆ ಯಾವುದೇ ತೊಂದರೆ ಆಗಿರಲಿಲ್ಲ  ಎರಡನೇ ಬಾರಿ ಆಸ್ಪತ್ರೆ ಕಡೆಯಿಂದಲೇ ರಕ್ತವನ್ನು ಹಾಕಿದ್ದಾರೆ  ಆಗ ಆಕೆಯ ಆರೋಗ್ಯದಲ್ಲಿ ಏರುಪೇರು ಆಗಿದೆ ರಕ್ತ ಹಾಕುತ್ತಿದ್ದಂತೆಯೇ ಶಿಲ್ಪಾ ಕೋಮಾಗೆ ಜಾರಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ  ಇಲ್ಲಿ ಕುಟುಂಬಸ್ಥರು ಬೇರೆ ಯಾವುದೋ ರಕ್ತವನ್ನು ನೀಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ಕೋಮಾಗೆ ಜಾರಿದ್ದ ಶಿಲ್ಪಾ ಕೊನೆಗೂ ಪ್ರಾಣ ಕಳೆದುಕೊಂಡಿದ್ದಾಳೆ ಆಕೆಯ ಸಾವಿನ ಬಗ್ಗೆ ನಮಗೆ ಅನುಮಾನ ಇದೆ ನಾವು ಮೆಡಿಕಲ್ ರಿಪೋರ್ಟ್ ಹಿಡಿದು ಆಸ್ಪತ್ರೆಗೆ ಹೋದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ತಿಲ್ಲ ಕೇಸ್ ದಾಖಲಿಸಿಕೊಳ್ಳಲು ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸರ ವಿರುದ್ಧವೂ ಕುಟುಂಸ್ಥರು ಆರೋಪಿಸಿದ್ದಾರೆ.

ಶಿಲ್ಪಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮಾಡಿರುವ ವೈದ್ಯಕೀಯ ನಿರ್ಲಕ್ಷ್ಯದ ಎಲ್ಲಾ ಗಂಭೀರ ಆರೋಪಗಳನ್ನು ಮಿರ್ಜಿ ಆಸ್ಪತ್ರೆಯ ಮುಖ್ಯಸ್ಥ ಡಾ  ಮಿರ್ಜಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ ಶಿಲ್ಪಾ ನಮ್ಮ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಸಂಪೂರ್ಣ ಆರೋಗ್ಯವಾಗಿಯೇ ಇದ್ದರು ಅವರಿಗೆ ನಿಯಮಾನುಸಾರ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು ಕುಟುಂಬಸ್ಥರ ವರ್ತನೆ ಮಾತ್ರ ಸರಿಯಿರಲಿಲ್ಲ ತಾವಾಗಿಯೇ ಸ್ವಂತ ನಿರ್ಧಾರ ಕೈಗೊಂಡು ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ ಚಿಕಿತ್ಸೆಯಲ್ಲಿ ನಮ್ಮ ಕಡೆಯಿಂದ ಯಾವುದೇ ತಪ್ಪಾಗಿಲ್ಲ ರೋಗಿಗೆ ಸಂಬಂಧಿಸಿದ ಪ್ರತಿಯೊಂದು ಅಧಿಕೃತ ದಾಖಲೆಗಳು ಆಸ್ಪತ್ರೆಯ ಬಳಿ ಲಭ್ಯವಿವೆ ಸತ್ಯಾಸತ್ಯತೆ ತಿಳಿಯಲು ಯಾವುದೇ ರೀತಿಯ ಕಾನೂನುಬದ್ಧ ತನಿಖೆಯನ್ನು ಎದುರಿಸಲು ನಾವು ಮುಕ್ತವಾಗಿ ಸಿದ್ಧರಿದ್ದೇವೆ ಎಂದು ಡಾ ಮಿರ್ಜಿ ತಿಳಿಸಿದ್ದಾರೆ.

ಕುಟುಂಬಸ್ಥರಿಂದ ಪ್ರತಿಭಟನೆ
ಇತ್ತ ಕುಟುಂಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ ಮಾತ್ರವಲ್ಲ ಶಿಲ್ಪಾಳ ಜಿವ ತೆಗೆದ ವೈದ್ಯಾಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು  ಆಕೆಯ ಸಾವಿಗೆ ನ್ಯಾಯ ಬೇಕು ಎಂದು ಪ್ರತಿಭಟಿಸಿದ್ದಾರೆ ಪ್ರತಿಭಟನೆಯಲ್ಲಿ ಶಿಲ್ಪಾಳ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ  ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು  ಜೊತೆಗೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ  ಈ ಮಧ್ಯೆ ಪೊಲೀಸರ ವಿರುದ್ಧವೂ ಆರೋಪ ಮಾಡಿರುವ ಕುಟುಂಬಸ್ಥರು  ಶಿಲ್ಪಾ ಸಾವಿನ ಬಗ್ಗೆ ತನಿಖೆ ನಡೆಸಿ  ನಮಗೆ ಪ್ರಕರಣದ ಮೇಲೆ ಅನುಮಾನ ಇದೆ ಎಂದು ದೂರು ಕೊಟ್ಟರೂ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST