ಚಿಂಚೋಳಿ : ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ ನಡೆಯಿತು.ಸಭೆಯಲ್ಲಿ ತಾಲೂಕಿನಲ್ಲಿ ಎದುರಾಗುವ ಸಮಸ್ಯೆಗಳಾದ ಮಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಹಾನಿ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳ ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಮೂಲಕ ಹಾಗೂ ತಾಲೂಕಿನಲ್ಲಿ ಆಗುವಂತಹ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಚಿಂಚೋಳಿ ಮೀಸಲು ಕ್ಷೇತ್ರದ ಶಾಸಕರಾದ ಡಾ.ಅವಿನಾಶ ಜಾಧವರವರು ಮಾತನಾಡಿ,ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು.ಗ್ರಾಮ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಲ್ಲಿರುವ ಸಿಬ್ಬಂದಿಗಳು ಗ್ರಾಮದಲ್ಲಿ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಯಾವಾಗಲೂ ಸಮಸ್ಯೆ ಬರೋಕ್ಕಿಂತ ಮುಂಚಿತವಾಗಿ ಮುಂಜಾಗ್ರತೆವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ರೀತಿಯಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತೆ ಅದಕ್ಕೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ವೈದ್ಯಾಧಿಕಾರಿಗಳು ಸಂಬಂಧ ಪಟ್ಟ ಎಲ್ಲಾ ಗ್ರಾಮಗಳಿಗೆ ವೀಕ್ಷಣೆ ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು ಅದೇ ರೀತಿಯಾಗಿ
ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಗಾಳಿ ಮಳೆ ಬಿರುಗಾಳಿ ಬರುವಂತ ಸಂದರ್ಭದಲ್ಲಿ ವಿದ್ಯುತ್ ಕಂಬದ ತಂತಿಗಳು ತೇಲಾಡುತ್ತೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಅಲ್ಲದೇ ಗಿಡಮರಗಳು ತಂತಿಗಳನ್ನು ತಟ್ಟದ ರೀತಿಯಲ್ಲಿ ಅವುಗಳನ್ನು ಸುರಕ್ಷಿತ ಮಾಡಬೇಕು ಅಷ್ಟೇ ಅಲ್ಲ ಕೆಲವೊಂದು ಸಂದರ್ಭದಲ್ಲಿ ಮಳೆ ಬರುವಂತ ಸಮಯದಲ್ಲಿ ಗಿಡಮರಗಳಿಂದ ವಿದ್ಯುತ್ ಸ್ಪರ್ಶ ಉಂಟಾಗುತ್ತೆ ಮುಂದೆ ಚರ್ಚೆ ಕ್ರಮ ಕೈಗೊಳ್ಳಬೇಕು ಮಳೆ ಬರುವಂತ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಬೇಕು ಅಥವಾ ಕರೆಂಟ್ ಬರದ ರೀತಿಯಲ್ಲಿ ಬಂದ್ ಮಾಡಬೇಕು ಮಳೆ ಮತ್ತು ಗಾಳಿ ಬಿಟ್ಟಾಗ ಈ ಒಂದು ವ್ಯವಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ
ಹಾನಿಗೊಳಗಾದ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚಾಗಿ ನೀರಿನ ಸಮಸ್ಯೆ ಕಂಡು ಬರುತ್ತೆ ಬೇಸಿಗೆಕಾಲ ಇರುವುದರಿಂದ ಕೊಳವೆಬಾವಿ ಕೈಕೊಡುತ್ತದೆ ವಿದ್ಯುತ್ ಕೈಕೊಡುತ್ತೆ ಹೀಗೆ ಹತ್ತಾರು ಸಮಸ್ಯೆಗಳನ್ನು ಕಂಡುಬರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಈ ಒಂದು ಸಭೆಯಲ್ಲಿ ಇನ್ನು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು ತಾಲೂಕಿನ ಜನರ ಸುರಕ್ಷತೆ ಹಾಗೂ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ತಾಲೂಕು ಆಡಳಿತ ಬದ್ಧವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ಅನೇಕ ತಾಲೂಕ ತಾಲೂಕ ಅಧಿಕಾರಿಗಳು ಅಧಿಕಾರಿಗಳು ಉಪಸ್ಥಿತಿ ಇದ್ದರು.
ವರದಿ: ಸುನೀಲ ಸಲಗರ

