LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಿಕ್ಷಕರ ಮಾರ್ಗದರ್ಶನವೇ ಯಶಸ್ಸಿನ ಮೆಟ್ಟಿಲು: ಸಿದ್ದಮಲ್ಲಯ್ಯ ಹಿರೇಮಠ

Advertisement

ಮಾನ್ವಿ: ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರ, ಹಾಗೂ ಶಿಕ್ಷಕರು ನೀಡುವ ಮಾರ್ಗದರ್ಶನದ ಮಹತ್ವದ ಬಗ್ಗೆ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ, ಶ್ರೇಷ್ಠ ಶಿಕ್ಷಕರಾದ ಅವರು ನೀಡಿದ ಕೊಡುಗೆ ಹಾಗೂ ಶಿಕ್ಷಕರಾದ ಅವರ ಆದರ್ಶಗಳ ಕುರಿತು ಮತ್ತು ಶಿಕ್ಷಕರ ಮಾರ್ಗದರ್ಶನವೇ ಯಶಸ್ಸಿನ ಮೆಟ್ಟಿಲು ಎಂದು  ಕಾರ್ಯಕ್ರಮವನ್ನು ಉದ್ಘಾಟಿಸಿ ಕಲ್ಮಠ ಕಾಲೇಜಿನ ಡಿ. ಇಡಿ ಪ್ರಾಂಶುಪಾಲ ಸಿದ್ದಮಲ್ಲಯ್ಯ ಹಿರೇಮಠ  ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.ಪಟ್ಟಣದ ಶ್ರೀ ಸಂಗಮೇಶ್ವರ ವೀರಮಾಂಬೆ ಕಲ್ಮಠ ಡಿ.ಎಡ್ ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು  ಆಚರಿಸಲಾಯಿತು.   ನಂತರ ಮಾತನಾಡಿ ಯಶಸ್ವಿ ಜೀವನಕ್ಕೆ ನಿರಂತರ ಅಭ್ಯಾಸ ಅತ್ಯಗತ್ಯ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಸಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವವನೇ ನಿಜವಾದ ಶಿಕ್ಷಕ  ಎಂದು ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡು ಶಿಸ್ತು, ಪರಿಶ್ರಮ ಹಾಗೂ ನಿರಂತರ ಅಧ್ಯಯನದ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಕಾಲೇಜಿನ ಆಡಳಿತಾಧಿಕಾರಿ ಶಂಕ್ರಯ್ಯ ಹಿರೇಮಠ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರುಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವು ಕುಮಾರಿ ಅನನ್ಯ ಮತ್ತು ನೇತ್ರಾವತಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಕುಮಾರಿ ನಯನಾಕ್ಷಿ ಅವರು ಸ್ವಾಗತ ಭಾಷಣ ಮಾಡುವ ಮೂಲಕ ಗಣ್ಯರು, ಉಪನ್ಯಾಸಕರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು ಕಾರ್ಯಕ್ರಮವನ್ನು ಕುಮಾರಿ ಮೇಘನಾ ಹಾಗೂ ರಮೇಶ್ ನಿರೂಪಿಸಿದರು. ಕುಮಾರಿ ಸೌಭಾಗ್ಯ ವಂದಿಸಿದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ -ಶ್ರೀಲಂಕಾ 2ನೇ ಏಕದಿನ ಪಂದ್ಯ ನಾಳೆ ಗ್ರಾ.ಪಂ.ಗೆ 2186 ಕೋಟಿ ನೀಡದ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಈಶ್ವರ ಖಂಡ್ರೆ ನಾಳೆಯವರೆಗೆ ವಿಧಾನಪರಿಷತ್ ಕಲಾಪ ವಿಸ್ತರಣೆ: ಡಾ.ಯತೀಂದ್ರ ಸಿದ್ದರಾಮಯ್ಯ ಘೋಷಣೆ ಬಿಜೆಪಿ ಉಸ್ತುವಾರಿಗಳ ಬದಲಾವಣೆ: ಹರೀಶ್ ದ್ವಿವೇದಿ ಹೆಗಲಿಗೆ ಕರ್ನಾಟಕದ ಜವಾಬ್ದಾರಿದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ:ಜಿಲ್ಲಾಧಿಕಾರಿ ಎಡಿಸಿ ಕಾರು ಜಪ್ತಿ ಶಿಕ್ಷಕರ ಮಾರ್ಗದರ್ಶನವೇ ಯಶಸ್ಸಿನ ಮೆಟ್ಟಿಲು: ಸಿದ್ದಮಲ್ಲಯ್ಯ ಹಿರೇಮಠಪಕ್ಷ ಸಂಘಟಿಸದಿದ್ದರೆ ಮುಂದಿನ ಚುನಾವಣೆಗೆ ಟಿಕೆಟ್ ಇಲ್ಲ: ಡಿ.ಕೆ. ಶಿವಕುಮಾರ್ಹಳ್ಳದಲ್ಲಿ ಈಜಾಡು ಹೋಗಿದ್ದ ಇಬ್ಬರು ಮಕ್ಕಳು ದಾರುಣ ಸಾವು ಮತ್ತೆ ಅಸಮಾಧಾನ : ಶಾಸಕ ಸ್ಥಾನಕ್ಕೆ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆಹಣಕಾಸು ಇಲಾಖೆ ಟಿಪ್ಪಣಿ ಬಹಿರಂಗ : 'ಖಾಲಿ ಚೆಂಬು' ಹಿಡಿದು ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ