Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧನ್ಯವಾದ ಸ್ನೇಹಿತರೇ : ಪ್ರಧಾನಿಯಿಂದ ಮತ್ತೊಂದು ಸೆಲ್ಫಿ ವಿಡಿಯೋ ಸಂದೇಶ

Advertisement

ನವದೆಹಲಿ : ತಮ್ಮ ಮಧ್ಯರಾತ್ರಿಯ ವಿಡಿಯೋ ಸಂದೇಶಕ್ಕೆ ಯುವಜನತೆಯಿಂದ ವ್ಯಕ್ತವಾದ ಅಭೂತಪೂರ್ವ ಸ್ಪಂದನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಧನ್ಯವಾದ ಅರ್ಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ನೀಡಿದ ಧನಾತ್ಮಕ ಸಲಹೆಗಳು ತಮ್ಮ ಮತ್ತು ಯುವ ಸಮುದಾಯದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯವರು ಹಂಚಿಕೊಂಡ ಈ ಧನ್ಯವಾದದ ವಿಡಿಯೋ ಭಾರೀ ಸದ್ದು ಮಾಡಿದೆ. ವಿಡಿಯೋ ಪೋಸ್ಟ್ ಆದ ಕೇವಲ 8 ನಿಮಿಷಗಳಲ್ಲಿ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು (ವ್ಯೂಸ್) ಪಡೆದುಕೊಂಡರೆ, ಇನ್ ಸ್ಟಾಗ್ರಾಮ್ ನಲ್ಲಿ 20 ನಿಮಿಷಗಳ ಒಳಗೆ 10 ಲಕ್ಷಕ್ಕೂ ಅಧಿಕ ಲೈಕ್ಸ್ ಗಳಿಸಿದೆ.

ಅಷ್ಟೇ ಅಲ್ಲದೆ, ಗುರುವಾರ ರಾತ್ರಿಯ ವಿಡಿಯೋ ಪೋಸ್ಟ್ ಬೆನ್ನಲ್ಲೇ ಒಂದೇ ರಾತ್ರಿಯಲ್ಲಿ ಪ್ರಧಾನಿಯವರ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ವೇಗದ ಗತಿಯ ನ್ಯಾಯಾಲಯಗಳು (ಫಾಸ್ಟ್ ಟ್ರ್ಯಾಕ್ ಕೋರ್ಟ್) ಮತ್ತು ಕಠಿಣ ಶಿಕ್ಷೆ ವಿಧಿಸುವ ಕರಡು ಕಾಯ್ದೆಯ ಕುರಿತು ಕೇಂದ್ರ ಸಚಿವ ಸಂಪುಟ ಚರ್ಚಿಸಲಿದೆ ಎಂದು ಪ್ರಧಾನಿ ಮೋದಿ ಗುರುವಾರ ರಾತ್ರಿ 11:52 ಕ್ಕೆ ಹಂಚಿಕೊಂಡಿದ್ದ ವಿಡಿಯೋದಲ್ಲಿ ಪ್ರಕಟಿಸಿದ್ದರು.

ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲೇ ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಸರ್ಕಾರ ಸಕಲ ಪ್ರಯತ್ನ ನಡೆಸಲಿದೆ ಎಂದು ಮೂರು ನಿಮಿಷಗಳ ಆ ವಿಡಿಯೋದಲ್ಲಿ ಹೇಳಿದ್ದರು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST