ನವದೆಹಲಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ನಿರ್ಧರಿಸುವ ಎರಡು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕಳೆದ ಬಾರಿ ಮಸೂದೆ ಮಂಡನೆಗೆ ಬಹುಮತ ಸಿಗದ ಕಾರಣ ಲೋಕಸಭೆಯಲ್ಲಿ ಈ ಮಸೂದೆಗೆ ಲೋಕಸಭೆಯಲ್ಲಿ ಸೋಲು ಉಂಟಾಗಿತ್ತು.ಇದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಮುಖಭಂಗ ಉಂಟಾಗಿತ್ತು.
ಆದರೂ ,ಬಿಟ್ಟು ಬಿಡದ ಕೇಂದ್ರ ಸರ್ಕಾರ ಪ್ರಾದೇಶಿಕ ಪಕ್ಷಗಳ ವಿಶ್ವಾಸ ಗಳಿಸಿಕೊಂಡು ಲೋಕಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಲು ಮುಂದಾಗಿದೆ.
ಈ ಸಂಬಂಧ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರ ಜೊತೆ ಗೃಹ ಸಚಿವ ಅಮಿತ್ ಶಾ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಉನ್ನತ ಮೂಲಗಳ ಪ್ರಕಾರ ಸರ್ಕಾರದ ಉದ್ದೇಶದ ಮಸೂದೆಗಳಿಗೆ ಈ ಬಾರಿ ಕೆಲವು ಷರತ್ತುಗಳೊಂದಿಗೆ ಡಿಎಂಕೆ ಟಿಎಂಸಿ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳ ಬೆಂಬಲ ಸೂಚಿಸಿವೆ ಎಂದು ಗೊತ್ತಾಗಿದೆ.
ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಸೋಲು ಉಂಟಾದ ಹಿನ್ನೆಲೆ ಡಿಎಂಕೆ ಮತ್ತು ಟಿಎಂಸಿ ಕೆಲವು ಷರತ್ತುಗಳನ್ನು ವಿಧಿಸಿ ಮಸೂದೆಗೆ ಬೆಂಬಲ ನೀಡಿದ ಮುಂದೆ ಬಂದಿವೆ ಎಂದು ಗೊತ್ತಾಗಿದೆ.

