Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಲಕೃಷ್ಣನ ಚಿತ್ರದ ಪಕ್ಕದಲ್ಲಿ 'ಚಿಕನ್ ಬಿರಿಯಾನಿ ಪ್ರದರ್ಶನ : ತೀವ್ರ ಆಕ್ರೋಶ 

Advertisement
ತಿರುವನಂತಪುರಂ: ಕೇರಳದ ಪ್ರಸಿದ್ಧ ಹೋಟೆಲ್‌ವೊಂದು ವಿಷು ಹಬ್ಬದ (Vishu) ಅಂಗವಾಗಿ ನೀಡಿದ ವಿವಾದಾತ್ಮಕ ಜಾಹೀರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಿಚ್ಚು ಹಚ್ಚಿದೆ.

ಹಿಂದೂಗಳ ಪವಿತ್ರ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಬಾಲಕೃಷ್ಣನ ಚಿತ್ರದ ಪಕ್ಕದಲ್ಲಿ 'ಚಿಕನ್ ಬಿರಿಯಾನಿ'ಯನ್ನು ಪ್ರದರ್ಶಿಸಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.


​ಕೇರಳದ ಮಲಪ್ಪುರಂ ಮೂಲದ ರೆಸ್ಟೋರೆಂಟ್‌ವೊಂದು ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ವಿಷು ಹಬ್ಬದ ವಿಶೇಷ ಆಫರ್ ಪ್ರಕಟಿಸಿತ್ತು. ಈ ಜಾಹೀರಾತಿನಲ್ಲಿ ಕೃಷ್ಣನ ಫೋಟೋದ ಪಕ್ಕದಲ್ಲೇ ಮಾಂಸಾಹಾರಿ ಬಿರಿಯಾನಿಯ ಚಿತ್ರವನ್ನು ಹಾಕಿ, "ವಿಷು ಹಬ್ಬದ ಸಂಭ್ರಮಕ್ಕೆ ಬಿರಿಯಾನಿ ಸವಿಯಿರಿ" ಎಂಬ ಒಕ್ಕಣೆ ಬರೆಯಲಾಗಿತ್ತು.


​ಈ ಜಾಹೀರಾತು ಪ್ರಕಟವಾಗುತ್ತಿದ್ದಂತೆಯೇ ನೆಟ್ಟಿಗರು ಹೋಟೆಲ್ ವಿರುದ್ಧ ಮುಗಿಬಿದ್ದಿದ್ದಾರೆ."ಹಬ್ಬದ ದಿನ ಕೃಷ್ಣನಿಗೆ ಸಸ್ಯಾಹಾರಿ ನೈವೇದ್ಯ ಅರ್ಪಿಸುವುದು ಸಂಪ್ರದಾಯ. ಅಂತಹ ದೈವದ ಪಕ್ಕದಲ್ಲಿ ಮಾಂಸಾಹಾರವನ್ನು ತೋರಿಸುವುದು ಅವಮಾನಕರ" ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ 'Tolerance Has Its Limits' (ಸಹನೆಗೂ ಒಂದು ಮಿತಿಯಿದೆ) ಎಂಬ ಹ್ಯಾಶ್‌ಟ್ಯಾಗ್ ವೈರಲ್ ಆಗಿದ್ದು, ಹೋಟೆಲ್ ಅನ್ನು ಬಹಿಷ್ಕರಿಸುವಂತೆ ಅನೇಕರು ಕರೆ ನೀಡಿದ್ದಾರೆ.


​ಪ್ರತಿಕ್ರಿಯೆ: ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ಹೋಟೆಲ್ ಆಡಳಿತ ಮಂಡಳಿಯು ಜಾಹೀರಾತನ್ನು ಡಿಲೀಟ್ ಮಾಡಿದೆ. ಆದರೆ, ಅಷ್ಟರಲ್ಲೇ ಅದರ ಸ್ಕ್ರೀನ್‌ಶಾಟ್‌ಗಳು ದೇಶಾದ್ಯಂತ ಹರಿದಾಡಿವೆ.


 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ