Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿನ್ನು ಶಿವ ಡಂಗುರ’ ಎಂಬ ಹೆಡ್‌ಲೈನ್‌ : ವಿಶ್ವವಾಣಿ ಪತ್ರಿಕೆ ವಿರುದ್ಧ ಆಕ್ರೋಶ 

Advertisement

ಬೆಂಗಳೂರು : ನಿನ್ನೆಯಷ್ಟೇ ( ಜೂನ್ 3 ) ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. 

ಈ ಮೂಲಕ ಹಲವು ದಿನಗಳಿಂದ ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಡಿಕೆ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದರ ಕುರಿತು ಸ್ಥಳೀಯ ಮಾಧ್ಯಮಗಳಿಂದ ಹಿಡಿದು ರಾಷ್ಟ್ರೀಯ ಮಾಧ್ಯಮಗಳವರೆಗೆ ಸುದ್ದಿ ಮಾಡಲಾಯಿತು.

ಅದರಂತೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಯಾದ ವಿಶ್ವವಾಣಿ ಸಹ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕುರಿತು ವಿವರವಾಗಿ ಸುದ್ದಿ ಮಾಡಿತ್ತು.

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಹಲವು ಬಾರಿ ಹಂಚಿಕೊಂಡಂತೆ ಈ ಬಾರಿಯೂ ಸಹ ತಮ್ಮ ಪತ್ರಿಕೆಯ ಮುಖಪುಟದ ಬಗ್ಗೆ ಫೋಟೊ ಹಂಚಿಕೊಂಡರು. 

ಫ್ರಂಟ್ ಪೇಜ್‌ನಲ್ಲಿ ‘ರಾಜ್ಯದಲ್ಲಿನ್ನು ಶಿವ ಡಂಗುರ’ ಎಂಬ ಹೆಡ್‌ಲೈನ್‌ ಅಡಿಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದನ್ನು ಕಂಡು ಹಲವಾರು ಶಿವಭಕ್ತರು ಹಿಂದೂ ದೇವರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಈ ಹೆಡ್‌ಲೈನ್ ಪಕ್ಕದಲ್ಲಿ ಶಿವ ದೇವರ ದೇಹಕ್ಕೆ ಡಿಕೆ ಶಿವಕುಮಾರ್ ಫೋಟೊ ಹಾಕಲಾಗಿದ್ದು, ಇದು ಭಕ್ತರನ್ನು ಕೆರಳಿಸಿದೆ. 

ಈ ಟ್ವೀಟ್ ಹಾಗೂ ಫೋಟೊವನ್ನು ಸಾಮಾಜಿಕ ಜಾಲತಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿರುವ ಭಕ್ತರು ಇದೇನಾ ಪತ್ರಿಕೋದ್ಯಮ, ಇದೇನಾ ಪತ್ರಿಕಾ ಸ್ವಾತಂತ್ರ್ಯ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಇದನ್ನು ಡಿಕೆಗೆ ಹಿಡಿಯಲಾದ ಬಕೆಟ್ ಎಂದು ಕಾಲೆಳೆದಿದ್ದಾರೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ