ಕಲಘಟಗಿ: ಪಟ್ಟಣದ ಬಸವೇಶ್ವರ ನಗರದಲ್ಲಿ(ಜನತಾ ಪ್ಲಾಟ್) ಕಿರಿಯ ಪ್ರಾಥಮಿಕ ಶಾಲೆ ಇದ್ದು ಇಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆದು ಪ್ರತಿ ವರ್ಷ ಮಕ್ಕಳು ಪರೀಕ್ಷೆಯಲ್ಲಿ ಉತ್ತಿಣ೯ರಾಗಿ ಬೇರೆ ಶಾಲೆಗಳಿಗೆ ಹೋಗುತ್ತಾರೆ.ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಆಟವು ಒಂದು ಉತ್ತಮವಾದ ಬೆಳವಣಿಗೆಯಾಗಿದೆ. ಆದರೆ ಇಲ್ಲಿ ಸರಕಾರಿ ಶಾಲೆಯ ಜಾಗವನ್ನು ಅದರ ಸುತ್ತಲೂ ಇರುವ ಜನರು ತಮ್ಮ ಸ್ವಂತ ಕೆಲಸದ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಕೆಲವರು ಶಾಲೆಯ ಜಾಗದಲ್ಲಿ ತಮ್ಮ ಮನೆಯ ಜಾಗ ಎಂದು ತಂತಿಯ ಬೇಲಿ, ಕಟ್ಟಿಗೆಯ ಬೇಲಿ,ಹುಲ್ಲಿನ ಬಣವಿ ಹಾಕಿಕೊಂಡಿದ್ದಾರೆ,ಶಾಲಾ ಅವಧಿಯಲ್ಲಿ ದನಗಳನ್ನು ಮೇಯಿಸಲು ಬಿಡುವುದು, ಇನ್ನೂ ಕೆಲವು ಜಾಗದಲ್ಲಿ ವರ್ಷಘಟ್ಟಲೇ ಕೆಟ್ಟು ನಿಂತಿರುವ ವಾಹನಗಳು ಶಾಲೆಯ ಗ್ರೌಂಡದಲ್ಲಿ ನಿಂತುಕೊಂಡಿವೆ, ,ರಾತ್ರಿ ವೇಳೆ ಶಾಲೆಯ ಕಟ್ಟೆಯ ಮೇಲೆ ಮಧ್ಯಪಾನ್ ಮಾಡಿ ಅಲ್ಲಿಯೇ ಬಾಟಲ್ ಗಳನ್ನು ಬಿಸಾಡಿ ಹೋಗುವುದು ಮತ್ತು ಖಾಲಿ ಬಾಟಲಿಗಳನ್ನು ಒಡೆದು ಹಾಕುವುದು ,ಮನೆಯ ಕಸವನ್ನು, ಬೇಡವಾದ ವಸ್ತುಗಳನ್ನು ಇದೇ ಜಾಗದಲ್ಲಿ ತಂದು ಹಾಕುತ್ತಾರೆ. ಚಿಕ್ಕ ಜಾಗದಲ್ಲಿ ಮಕ್ಕಳು ಆಟ ಆಡುವಾಗ ಕಾಲಿಗೆ ಗಾಜಿನ ಚೂರುಗಳು,ತಗಡಿನ ಚೂರುಗಳು ಚುಚ್ಚುತ್ತಿವೆ.
ಇದರಿಂದ ಶಾಲೆಯ ವಿದ್ಯಾರ್ಥಿಗಳು ಆಟ ಆಡಲು, ಪಠ್ಯತರ ಚಟುವಟಿಕೆ ನಡೆಸಲು ಸರಕಾರಿ ಶಾಲೆಗೆ ಜಾಗ ಇದ್ದು ಇಲ್ಲದಂತಾಗಿದೆ. ಇದಕ್ಕೆ ಸಂಬಂಧ ಪಟ್ಟ ಶಾಲಾ ಅಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಎಷ್ಟೋ ಸಾರಿ ಮನವಿ ಮಾಡಿಕೊಂಡರು ಕ್ಯಾರೇ ಎನ್ನದ ಅಧಿಕಾರಿಗಳು, ಇದರಿಂದ ಶಾಲಾ ಶಿಕ್ಷಕರು ಮತ್ತು ಮಕ್ಕಳು ಬೇಸರ ವ್ಯಕ್ತ ಪಡಿಸಿದರು. ಮಕ್ಕಳ ಸುರಕ್ಷತೆಗಾಗಿ ಶಾಲೆಯ ಜಾಗವನ್ನು ಅಳತೆ ಮಾಡಿ ಅದಕ್ಕೆ ಸರಿಯಾಗಿ ಕಂಪೌಂಡ್ ಕಟ್ಟಿಸಿ ಕೊಡಬೇಕು ಎಂದು ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಅಧಿಕಾರಿಗಳಿಗೆ ಕೇಳಿಕೊಂಡರು.


