ಕೋಲ್ಕತ್ತಾ: ಬಿಜೆಪಿ ಮತದಾನ ಸಿಬ್ಬಂದಿ ಮೂಲಕ ಮತದಾರರನ್ನು ಬೆದರಿಸುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿAದು ದ್ವಿತೀಯ ಹಂತದ ಮತದಾನ ಪ್ರಕ್ರಿಯೆ ಸಾಗಿದ್ದು, ಬಿಜೆಪಿ ಅಣತಿಯಂತೆ ನಡೆದುಕೊಳ್ಳುತ್ತಿರುವ ಮತದಾನ ಸಿಬ್ಬಂದಿ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
೧೪೩ ಸ್ಥಾನಗಳಲ್ಲಿ ಮತದಾನ ಪ್ರಕ್ರಿಯೇ ಇಂದು ನಡೆದಿದ್ದು, ದ್ವಿತೀಯ ಹಂತದ ಮತದಾನ ತೀವ್ರ ಮಹತ್ವ ಪಡೆದಿದೆ ಅಲ್ಲದೇ ಈ ಹಂತಗಳಲ್ಲಿ ನಡೆಯುವ ಮತಕ್ಷೇತ್ರಗಳಲ್ಲಿ ಟಿಎಂಸಿ ಪ್ರಬಲವಾಗಿರುವುದರಿಂದ ವೋಟಿಂಗ್ ಸಿಬ್ಬಂದಿ ಮೇಲೆ ಪ್ರಭಾವ ಬೀರಿ ಬಿಜೆಪಿ ತನ್ನ ಪರ ಮತದಾನ ಮಾಡುವಂತೆ ಮತದಾರರ ಮೇಲೆ ಬೆದರಿಕೆ ಹಾಕುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.

