ನ್ಯೂಕ್ಲೀಯರ್ ಒಪ್ಪಂದವಿಲ್ಲದೇಯೇ ಇರಾನ್‌ನೊಂದಿಗಿನ ಯುದ್ದ ಸಮಾಪ್ತಿಗೊಳಿಸಲು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಮನಸ್ಸು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಹಿರಿಯ ಸೇನಾ ಅಧಿಕಾರಿಗಳಿಗೆ ಈ ಕುರಿತು ಡೋನಾಲ್ಡ್ ಟ್ರಂಫ್ ಅವರು ಸಂಕೇತಗಳನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ತೆಹರಾನ್‌ನೊಂದಿಗಿನ ನ್ಯೂಕ್ಲಿಯರ್ ಒಪ್ಪಂದದ ಕುರಿತು ಯಾವುದೇ ಸುರಕ್ಷತೆ ಕ್ರಮ ವಹಿಸದೆಯೂ ಕೂಡ ಟ್ರಂಫ್ ಯುದ್ದ ಸಮಾಪ್ತಿಗೆ ನಿರ್ಧಾರ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.


