ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಲಲಿತಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಅಮ್ಮನ ಮಡಿಲು ಟ್ರಸ್ಟ್ ನಲ್ಲಿ ಆಶ್ರಯ ಪಡೆದಿದ್ದ ನಟಿ ಲಲಿತಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳ ಕಾಲ ಕಲಾ ಸೇವೆ ಮಾಡಿದ ಹಿರಿಯ ಕಲಾವಿದೆ ಲಲಿತಮ್ಮ ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ, ಬೆಂಗಳೂರಿನ 'ಅಮ್ಮನ ಮಡಿಲು ಟ್ರಸ್ಟ್' ಆಶ್ರಮದಲ್ಲಿದ್ದು, ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದರು.
ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸುಂಟರಗಾಳಿ' ಸಿನಿಮಾದಲ್ಲಿ ಅವರು ಮಾಡಿದ್ದ 'ಸಾರಾಯಿ ಶಾರದೆ' ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
ಮದುವೆ, ಮಕ್ಕಳಿಲ್ಲದೆ ಲಲಿತಮ್ಮ ಅವರು ಒಂಟಿಯಾಗಿಯೇ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮತ್ತೊಬ್ಬ ಕಲಾವಿದೆ ಪಂಕಜಾ ಅವರು ಗಮನಿಸಿ, ಬೆಂಗಳೂರಿನ 'ಅಮ್ಮನ ಮಡಿಲು ಟ್ರಸ್ಟ್' ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿದ್ದರು.


