ಕಲಘಟಗಿ: ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ದಿನಾಂಕ 4 ರ ರವಿವಾರ ಸಂಜೆ 6 ಗಂಟೆಗೆ ಮಹಾ ಶಕ್ತಿ ಮಹಾಕಾಳಿ ಎಂಬ ಯಕ್ಷಗಾನ ಕಥಾನಕವನ್ನು ಉಚಿತ ಪ್ರವೇಶದೊಂದಿಗೆ ಪ್ರದರ್ಶಿಸಲಾಗುವುದು.
ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಧಾರವಾಡ, ಕರಾವಳಿ ಹಾಗೂ ಕಲಘಟಗಿ ಯಕ್ಷಗಾನ ಕಲಾಭಿಮಾನಿಗಳು, ಹೋಟೆಲ್ ಉದ್ದಿಮೆದಾರರು ಹಾಗೂ ಜನತಾ ಇಂಗ್ಲಿಷ್ ಸ್ಕೂಲ್ ಆಡಳಿತ ಮಂಡಳಿ ಯವರುಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿಯ ಕಲಾವಿದರು ಈ ಸುಂದರ ಕಥಾನಕವನ್ನು ಸರ್ವಾಂಗ ಸುಂದರವಾಗಿ ಅಭಿನಯಿಸಲಿದ್ದಾರೆ.
ಕಾರಣ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಯಕ್ಷಗಾನ ಮತ್ತು ಸಂಸ್ಕೃತಿ ಸಂಘದ ಅಧ್ಯಕ್ಷ, ನ್ಯಾಯವಾದಿ ಎಸ್.ಆರ್.ಹೆಗಡೆ ಹಾಗೂ ಪತ್ರಕರ್ತ ಪ್ರಭಾಕರ ನಾಯಕ ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.


