Ad imageAd image

ಕರಾಳ ಗುರುವಾರ : ಹಳಿ ತಪ್ಪಿದ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲು

Bharath Vaibhav
ಕರಾಳ ಗುರುವಾರ : ಹಳಿ ತಪ್ಪಿದ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲು
WhatsApp Group Join Now
Telegram Group Join Now

ನವದೆಹಲಿ: ದೆಹಲಿ ಬಳಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿನ 4ನೇ ಬೋಗಿ ಹಳಿ ತಪ್ಪಿದೆ. ಇಂದು ಸಂಜೆ 4:10ರ ಸುಮಾರಿಗೆ ರೈಲು ಸಂಖ್ಯೆ 64419 ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ಒಂದು ಬೋಗಿಯು ಶಿವಾಜಿ ಸೇತುವೆಯ ಬಳಿ ಹಳಿತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಅಧಿಕಾರಿಗಳು ತಕ್ಷಣವೇ ಹಳಿ ತಪ್ಪಿದ ಬೋಗಿಯನ್ನು ಮರು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪ್ರಯಾಣಿಕರು ಕೂಡ ಸ್ಥಳದಲ್ಲೇ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ರೈಲು ಸಂಚಾರ ಪುನರಾರಂಭಗೊಳ್ಳುವ ಸಾಧ್ಯತೆಯಿದೆ.

 

 

WhatsApp Group Join Now
Telegram Group Join Now
Share This Article
error: Content is protected !!