Ad imageAd image

ಜೂ.6ರಂದು ಬಸವ ಜಯಂತಿ ಚಿಂಚೋಳ್ಳಿ ಪಟ್ಟಣದಲ್ಲಿ

Bharath Vaibhav
ಜೂ.6ರಂದು ಬಸವ ಜಯಂತಿ ಚಿಂಚೋಳ್ಳಿ ಪಟ್ಟಣದಲ್ಲಿ
WhatsApp Group Join Now
Telegram Group Join Now

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಣದಲ್ಲಿ 892 ಬಸವ ಜಯಂತಿಯ ಕಾರ್ಯಕ್ರಮವು ಜೂನ್ 6ನೇ ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತೋತ್ಸವದ ಸಮಿತಿ ಅಧ್ಯಕ್ಷರಾದ ನೀಲಕಂಠ ಸೀಳಿನ ಹೇಳಿದರು.

ಪೋಲಕಪಳ್ಳಿ ಪ್ರವಾಸ ಮಂದಿರದಲ್ಲಿ ಕಾರ್ಯಕ್ರಮದ ಪೋಸ್ಟರ್ ಹಾಗೂ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ ಜೂನ್ 6ನೇ ರಂದು ಸಾಯಂಕಾಲ 5:00 ಗಂಟೆಗೆ ವೈಜನಾಥ್ ಪಾಟೀಲ್ ಕಲ್ಯಾಣ ಮಂಟಪ ಅವಣದಲ್ಲಿ ಬಸವ ಜಯಂತಿ ಕಾರ್ಯಕ್ರಮವ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳು ಮತ್ತು ಹುಲಸೂರು ಶಿವನಂದ ಸ್ವಾಮಿಗಳು ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಹಾಗೂ ಸಚಿವರು ಲೋಕಸಭಾ ಸದಸ್ಯರು ಶಾಸಕರು ವೀರಶೈವ ಲಿಂಗಾಯತ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದೀಪಕನಾಗ ಪುಣ್ಯಶೆಟ್ಟಿ,ಶರಣು ಪಾಟೀಲ್ ಮೋತಕಪಳ್ಳಿ,ಸಂತೋಷ ಗಡಂತಿ, ಮಲ್ಲಿಕಾರ್ಜುನ್ ಪಾಲಾಮೂರ್,ಅವರು ಕೂಡ ಮಧ್ಯಮದವರ ಜೊತೆಗೆ ಅವರು ಕೂಡ ಮಾತನಾಡಿ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ,ರಾಷ್ಟ್ರೀಯ ಬಸವದಾಳದ ಅಧ್ಯಕ್ಷರಾದ ನಂದಿಕುಮಾರ್ ಪಾಟೀಲ,ಸಮಾಜ ಮುಖಂಡರಾದ ದಿನೇಶ್ ದುಗ್ಗಾಣಿ,ವೀರೇಶ್ ಯoಪಳ್ಳಿ,ವೀರೇಶ್ ದೇಸಾಯಿ,ಶಿವಶರಣಪ್ಪ ಡೆಂಗಿ,ಶಿವಬಸಯ್ಯ ಸ್ವಾಮಿ,ವಿವೇಕ ಪಾಟೀಲ್, ಸಂತೋಷ್ ಖಡಗದ,ಶಂಕರ್ ಶಿವಪೂರಿ, ಸುರೇಶ್ ದೇಶಪಾಂಡೆ,ಮಲ್ಲಿಕಾರ್ಜುನ ಭೂಶೆಟ್ಟಿ, ಅಣವರ್,ರಾಜಶೇಖರ್ ಮುಸ್ತಾರಿ,ಚೇತನ್ ಹುಡದಳ್ಳಿ,ಸುರೇಶ ಸುಂಕದ,ಸಂಗಮೇಶ್ ಮೂಲಿಮನಿ,ಸೂರ್ಯಕಾಂತ್ ಹುಲಿ,ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು

ವರದಿ : ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!