ಸಿಂಧನೂರು: ತಾಲೂಕಿಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯತಿಗಳು ನರೇಗಾ ಯೋಜನೆಯಲ್ಲಿ ಪರ್ಸೆಂಟೇಜ್ ದಂಧೆಗಿಳಿದ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ ಎಂದು “ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳು ಹೋರಾಟ ಸಮಿತಿ” ಸಂಚಾಲಕರು ಮಾತನಾಡಿ 2005ರಲ್ಲಿ ಭಾರತ ದೇಶದ ಬಡತನ ನಿರ್ಮೂಲನೆ ಮಾಡಲು ಹಾಗೂ ದೇಶದ ಬಡ ರೈತ ಕಾರ್ಮಿಕರು ಗೂಳೆ ಹೋಗುವುದನ್ನು ತಪ್ಪಿಸಲು ಅತೀ ಮಹತ್ವಕಾಂಕ್ಷಿ ಯೋಜನೆಯದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಎನ್ನುವಂತ ದೊಡ್ಡ ಯೋಜನೆಯನ್ನು ಜಾರಿಗೊಳಿಸಿ ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ಇಂದು ಕೆಲವು ಭ್ರಷ್ಟ ಅಧಿಕಾರಿಗಳು ಈ ಯೋಜನೆಯನ್ನು ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿಯಾಗಿ ತಾಲೂಕಿನ ನರೇಗಾ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಕಾಮಗಾರಿ ಮಾಡಲಾಗಿದ್ದು ಗುತ್ತೇದಾರರಿಗೆ ಮತ್ತು ಸಂಸ್ಥೆದಾರರಿಗೆ ವೆಚ್ಚದ ಹಣವನ್ನು ಸಂದಾಯ ಮಾಡುವಾಗ 1 ಲಕ್ಷಕ್ಕೆ 35 ರಿಂದ 40,000 ಸಾವಿರ ರೂ ಪರ್ಸೆಂಟೇಜ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತದೆ ಗ್ರಾಮ ಪಂಚಾಯತಿ ಪಿಡಿಒಗಳು ಹಾಗೂ ನರೇಗಾ ಯೋಜನೆಯ ಕಿರಿಯ ಅಭಿಯಂತರರು ಇದರ ಕಿಂಗ್ ಪಿನ್ ಗಳಾಗಿದ್ದು ಇಂತಹ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಸರ್ಕಾರವು ಸೂಕ್ತ ತನಿಖೆ ಮಾಡಬೇಕು ಹಾಗೂ ಇವರ ಮೇಲೆ ವಿಶೇಷ ತನಿಖೆ ಕೂಡ ರಚನೆ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿ ಅಮಾನತು ಮಾಡಬೇಕೆಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಅಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ – ಪ್ರಧಾನ ಸಂಚಾಲಕ ಮೌನೇಶ್ ಜಾಲವಾಡಗಿ, ಸಂಚಾಲಕರಾದ- ರಮೇಶ್ ಶ್ರೀನಿವಾಸ್ ಕ್ಯಾಂಪ್, ಚನ್ನಬಸವ ಯಾಪಲಪರ್ವಿ, ದುರುಗೇಶ ಕಲ್ಮಂಗಿ, ಮಲ್ಲಿಕಾರ್ಜುನ ಯಾಪಲಪರ್ವಿ, ನರಸಪ್ಪ ಬಡಿಗೇರ್, ಇದ್ದರು.
ವರದಿ :ಬಸವರಾಜ ಬುಕ್ಕನಹಟ್ಟಿ