–ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ
ಅವರ ನಿವೇದನೆ, ಪ್ರಿಯ ಮತದಾರ ಪ್ರಭುಗಳೇ,
————–ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷ ಪೂರ್ಣ
————————-ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ- ಸಹಕಾರಕ್ಕೆ ಅಭಿನಂದನೆಗಳು
ಚಿಕ್ಕೋಡಿ: ನನ್ನನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆಮಾಡಿ, ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಈಗ ಒಂದು ವರ್ಷ ಪೂರ್ಣವಾಗಿದೆ. ಈ ಅವಧಿಯಲ್ಲಿ ನಿಮ್ಮ ವಿಶ್ವಾಸ ಮತ್ತು ಸಹಕಾರಕ್ಕಾಗಿ ನಾನು ಹೃತ್ಪೂರ್ವಕವಾಗಿ ಕೃತಜ್ಞಳು.
ಈ ಒಂದು ವರ್ಷದಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿ, ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಸಕ್ರಿಯವಾಗಿ ಕೆಲಸ ಮಾಡಲು ನನಗೆ ಅವಕಾಶ ಕಲ್ಪಿಸಿದ್ದೀರಿ. ನಿಮ್ಮ ಎಲ್ಲರ ಸಹಯೋಗದೊಂದಿಗೆ ಶಿಕ್ಷಣ, ಆರೋಗ್ಯ, ರೋಡು-ರೈಲು ಸೌಕರ್ಯ, ಕೃಷಿ, ಉದ್ಯೋಗ ಸೃಷ್ಟಿ, ಮಹಿಳಾ-ಯುವಜನ ಸಬಲೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿಗಾಗಿ ನಿರಂತರ ಶ್ರಮಿಸುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ನಮ್ಮ ಚಿಕ್ಕೋಡಿ ಕ್ಷೇತ್ರವು ಸಮೃದ್ಧಿ, ಸಮಾಧಾನ ಮತ್ತು ಅಭಿವೃದ್ಧಿಯ ದಿಶೆಯಲ್ಲಿ ಮುನ್ನಡೆಯಲು ನನ್ನ ಪ್ರಯತ್ನಗಳು ಹೆಚ್ಚು ತೀವ್ರಗೊಳ್ಳುತ್ತವೆ. ನಿಮ್ಮ ಸಲಹೆಗಳು, ಸೂಚನೆಗಳು ಮತ್ತು ಬೆಂಬಲ ನನಗೆ ಶಕ್ತಿ ನೀಡುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿ, ನಮ್ಮ ಪ್ರದೇಶಕ್ಕೆ ಹೆಚ್ಚಿನ ಸಾಧನೆಗಳನ್ನು ತರೋಣ.
ನಿಮ್ಮ -ಪ್ರಿಯಾಂಕಾ ಜಾರಕಿಹೊಳಿ
ಸಂಸದೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರ.
ವರದಿ: ರಾಜು ಮುಂಡೆ