ಸಿರುಗುಪ್ಪ: ನಗರದ ರೇಣುಕಾಶ್ರಮದ ಹತ್ತಿರದ ಸಾಧನಾ ತರಬೇತಿ ಕೇಂದ್ರದಿಂದ ಜರುಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ನಿವೃತ್ತ ಮುಖ್ಯಗುರು ಹಾಗೂ ಶಿವಶರಣೆ ನೀಲಮ್ಮ ಬ್ಯಾಂಕಿನ ಅಧ್ಯಕ್ಷರಾದ ಪಂಪನಗೌಡ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಮಕ್ಕಳು ಇತ್ತೀಚೆಗೆ ಮೊಬೈಲ್‌ನ ದುಷ್ಪರಿಣಾಮದಿಂದ ದೂರವಿಡಲು ಈ ಬೇಸಿಗೆ ಶಿಬಿರವು ಸೂಕ್ತವಾಗಿದೆ.
ಸರ್ಕಾರದ ಅಧೀನದಲ್ಲಿನ ಪ್ರತಿಷ್ಟೆಯ ಶಾಲೆಗಳ ಪ್ರವೇಶ ಪರೀಕ್ಷೆ ಬರೆಸುವ ಪೋಷಕರ ಪಡುವ ಶ್ರಮ ಅಗತ್ಯವಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಯಿಲ್ಲದೇ ಪ್ರತಿಷ್ಟಿತ ಸರ್ಕಾರಿ ವಸತಿಯುತ ಶಾಲೆಗಳಿಗೆ ಆಯ್ಕೆಯಾಗುವುದು ಕಷ್ಟಕರ.
ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಆಯ್ಕೆಗೆ ಕಾರಣರಾದ ತರಬೇತಿ ಕೇಂದ್ರದ ಎಲ್ಲಾ ಭೋದಕ ಕೀರ್ತಿ ಸಲ್ಲುತ್ತದೆಂದರು.ಸಾಧನಾ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ ಲಿಂಗನಗೌಡ ಮಾತನಾಡಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣದಲ್ಲಿ ಸ್ಪರ್ಧೆಯನ್ನು ನೀಡುವುದರಿಂದ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತವೆಂಬ ದೃಷ್ಟಿಯಿಂದ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ತರಬೇತಿಯನ್ನು ನೀಡಲಾಗುತ್ತಿದೆ.
ಪೋಷಕರ ಭರವಸೆಯಂತೆ ನವೋದಯ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಅಬ್ದುಲ್ ಕಲಾಂ ವಸತಿಯುತ ಶಾಲೆಗಳಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಶಿಕ್ಷಣದ ಜತೆ ಜತೆಗೆ ಮಕ್ಕಳಿಗೆ ದ್ಯಾನ, ವ್ಯಾಯಾಮ ಇನ್ನಿತರ ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಸಾಧನೆಗೆ ಕಾರಣವಾದ ನಮ್ಮ ಸಾಧನಾ ಕೋಚಿಂಗ್ ಸೆಂಟರ್ ಬಗ್ಗೆ ಇನ್ನಿತರರಿಗೆ ತಿಳಿಸಿ ನಮ್ಮ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮುಖ್ಯಗುರು ಧರ್ಮಣ ಮುಖಂಡರಾದ ಆರ್.ಸಿ.ಪಂಪನಗೌಡ, ವೀರನಗೌಡ, ಹಾಗೂ ಕೋಚಿಂಗ್ ಸೆಂಟರ್‌ನ ಬೋಧಕ ಮತ್ತು ಭೋದಕೇತರ ಸಿಬ್ಬಂದಿಗಳು, ಮಕ್ಕಳು, ಪೋಷಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ