Ad imageAd image

ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ ಸೇನಾನಿ ಡಾ. ಯಶವಂತ್ ಮಂಜುನಾಥ್ (ಎಬಿಬಿ) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ 

Bharath Vaibhav
ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ ಸೇನಾನಿ ಡಾ. ಯಶವಂತ್ ಮಂಜುನಾಥ್ (ಎಬಿಬಿ) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ 
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ದಾಸರಹಳ್ಳಿ ಯ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಜನನಾಯಕ ಜನಸೇವೆಯೇ ಜನಾರ್ದನ ಸೇವೆ ಎಂದು ಆದರ್ಶ ಜೀವನ ನಡೆಸುತ್ತಿರುವ ಬಾಗಲುಗುಂಟೆ ಬ್ಲಾಕಿನ ಗ್ರೆಟರ್ ಬೆಂಗಳೂರು ಪಾಲಿಕೆಯ ಪ್ರಬಲ ಆಕಾಂಕ್ಷಿ ಮಂಜುನಾಥ ನಗರದ ನಿವಾಸಿ ಶ್ರೀಮತಿ ಚಂದ್ರಕಲಾ ಹಾಗೂ ಡಾ. ಎಸ್ ಮಂಜುನಾಥ್ (ಎಬಿಬಿ) ಮಂಜಣ್ಣ ಅವರ ಸುಪುತ್ರ ಡಾ. ಯಶವಂತ್ ಮಂಜುನಾಥ್ ರವರು ದೇಶ ಸೇವೆಯೇ ಈಶ ಸೇವೆ ಎಂದು ನಂಬಿ ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರಿಗೆ ಶುಶ್ರುತೆ ಮಾಡುತ್ತಾ ಅವರೊಟ್ಟಿಗೆ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕೆಲ ದಿನಗಳ ರಜೆ ಮೇಲೆ ಕುಟುಂಬ ವರ್ಗದವರ ಜೊತೆಗೆ ಸೇರಲು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಯಾಪ್ಟನ್ ಅರ್ಜುನ್ ಗೌಡ (ಯಶವಂತ್ ಮಂಜುನಾಥ್)ನ ಕುಟುಂಬ ವರ್ಗದವರು ಸ್ನೇಹಿತರು ಹಿತೈಷಿಗಳು ಬಹಳ ಉಸ್ತುಕರಾಗಿ ಬರಮಾಡಿಕೊಂಡರು.

ಸ್ನೇಹಿತರು ಮತ್ತು ಕುಟುಂಬ ವರ್ಗದ ಕೆಲವು ಪುಟಾಣಿಗಳು ಸೈನಿಕ ವೇಷಧರಿಸಿ ಫಲಪುಷ್ಪಗಳನ್ನು ನೀಡಿ ವಿಶೇಷ ರೀತಿಯಲ್ಲಿ ಬರಮಾಡಿಕೊಂಡದು ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರಿಂದ ನಿಲ್ದಾಣದ ಸಿಬ್ಬಂದಿ ವರ್ಗದವರಿಂದ ಪ್ರಶಾಂಸೆಗೆ ಪಾತ್ರವಾದ್ದದ್ದು ಕಂಡುಬರುತ್ತಿತ್ತು.

ಇಷ್ಟೇ ಅಲ್ಲದೆ ಕ್ಯಾಪ್ಟನ್ ಅರ್ಜುನ್ ಗೌಡರವರ ಹುಟ್ಟುಹಬ್ಬವನ್ನು ಸಹ ಬಹಳ ಸಂಭ್ರಮ ಉಲ್ಲಾಸಗಳಿಂದ ಆಚರಿಸಿದರು ಈ ಸಂದರ್ಭದಲ್ಲಿ ಕುಟುಂಬ ವರ್ಗದವರನ್ನು ಪಾಲ್ಗೊಂಡಿದ ಹಿತೈಷಿಗಳು ತಂದೆ ಜನರ ಸೇವೆಯೇ ಜನಾರ್ದನ ಸೇವೆ ಎಂದರೆ ಮಗನು ತಂದೆಯಂತೆಯೇ ದೇಶ ಸೇವೆಯೇ ಈಶ ಸೇವೆ ಎಂದು ನಂಬಿ ನಡೆಯುತ್ತಿರುವುದು ಅಪರೂಪದಲ್ಲಿ ಅಪರೂಪ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಭಗವಂತನು ಸಕಲವನ್ನು ಕರುಣಿಸಿ ಕಾಪಾಡಲಿ ಎಂದು ಹಾಡಿ ಹೊಗಳಿ ಖುಷಿ ಹಂಚಿಕೊಂಡರು.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!