ಚಿಕ್ಕೋಡಿ : ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ನಕಲಿ ಬಾಬಾಗಳ ಹಾವಳಿ. ನಕಲಿ ಬಾಬಾನಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮಿಸ್ವಾಮಿ. ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿ ಅತ್ಯಾಚಾರ ನಡೆಸಿದ ಕಾಮುಕ ಸ್ವಾಮಿ. ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜನ ಮೇಲೆ ಪೋಕ್ಸೋ ಕೇಸ್ ದಾಖಲು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮ.
ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ರಾಯಚೂರು, ಬಾಗಲಕೋಟೆ ಜಿಲ್ಲೆಗೆ ಸುತ್ತಾಡಿಸಿದ ಕಾಮುಕ. ರಾಯಚೂರು ಹಾಗೂ ಬಾಗಲಕೋಟೆಯ ಜಿಲ್ಲೆ ಲಾಡ್ಜ್‌ಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಸ್ವಾಮಿ.
ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಸ್ವಾಮಿ.
ಈ ಕುರಿತು ಬಾಗಲಕೋಟ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ತದನಂತರ ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರ ಮಾಡಿದ ಬಾಗಲಕೋಟೆ ಪೊಲೀಸರು.
ಆರೋಪಿ ಕಾಮುಕ ಸ್ವಾಮಿಯನ್ನ ವಶಕ್ಕೆ ಪಡೆದು ಜೈಲಿಗಟ್ಟಿದ್ದ ಮೂಡಲಗಿ ಪೊಲೀಸರು.
ವರದಿ : ಅಜಯ್ ಕಾಂಬಳೆ