ಚೇಳೂರು :ತಾಲ್ಲೂಕಿನ ಜಾಮಿಯಾ ಮಸೀದಿಯಲ್ಲಿ ಇಂದು ವಿಜೃಂಬನೆಯಿಂದ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಶಬೆ -ಭಾರತ್ ಹಬ್ಬವನ್ನು ಆಚರಣೆ ಮಾಡಿದರು, ನಮಾಜ್ ಮಾಡಿ ಪ್ರಾರ್ಥನೆ ಮಾಡಿದರು, ನಂತರ ಮಕ್ಕಳ ಯಾವ ರೀತಿ ನಾವು ತಂದೆ -ತಾಯಿ ಗೌರವಿಸಬೇಕು ಎಂದು ತಿಳಿಸಿದರು.
ಅಲ್ಲದೇ ಯಾವುದೇ ಜಾತಿ -ಭೇದ ಬೇಡ ನಾವೆಲ್ಲರೂ ಒಳ್ಳೆಯವರಾಗಿ ಬಾಳಬೇಕು ನಾವು ದೇವರನ್ನು ನೆನಪಿಸಿಕೊಳ್ಳಬೇಕು, ನಾವು ಸುಳ್ಳು ಹೇಳಬಾರದು, ಸತ್ಯವನ್ನು ಮಾತನಾಡುವುದು ಕಲಿಯಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್, ಇಮ್ತಿಯಾಜ್, ಇಲ್ಲು, ಸತ್ತರ್ ಸಾಬ್ ಹಾಗೂ ಮಸೀದಿಯ ಸಿಬ್ಬಂದಿಗಳು ಹಾಗೂ ಸದಸ್ಯರು ಹಾಜರಿದ್ದರು.
ವರದಿ :ಯಾರಬ್. ಎಂ.