ಚೇಳೂರು : ಚೇಳೂರು ತಾಲ್ಲೂಕಿನ ಮದೀನಾ ಮಸೀದಿಯಲ್ಲಿ ಇಂದು ವಿಜೃಂಬನೆಯಿಂದ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಶಬೆ -ಭಾರತ್ ಹಬ್ಬವನ್ನು ಆಚರಣೆ ಮಾಡಿದರು, ಈ ಸಂದರ್ಭದಲ್ಲಿ ಸಾಲನ ಇನಾಮಿ ಅರ್ಬಿಯತ್ ಜಲಸ ಕಾರ್ಯಕ್ರಮ.
ವನ್ನು ಹಮ್ಮಿಕೊಳ್ಳಲಾಗಿತ್ತು ನಮಾಜ್ ಮಾಡಿ ಪ್ರಾರ್ಥನೆ ಮಾಡಿದರು, ನಂತರ ಮಕ್ಕಳ ಯಾವ ರೀತಿ ನಾವು ತಂದೆ -ತಾಯಿ ಗೌರವಿಸಬೇಕು ಎಂದು ತಿಳಿಸಿದರು ಅಲ್ಲದೇ ಯಾವುದೇ ಜಾತಿ -ಭೇದ ಬೇಡ ನಾವೆಲ್ಲರೂ ಒಳ್ಳೆಯವರಾಗಿ ಬಾಳಬೇಕು ನಾವು ದೇವರನ್ನು ನೆನಪಿಸಿಕೊಳ್ಳಬೇಕು, ನಾವು ಸುಳ್ಳು ಹೇಳಬಾರದು, ಸತ್ಯವನ್ನು ಮಾತನಾಡುವುದು ಕಲಿಯಬೇಕು ಅಲ್ಲದೇ ತಮ್ಮ -ಕಷ್ಟ ಸುಕಗಳನ್ನು ಈಡೇರಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು, ಮದರಸ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಹಬ್ಬದ ದಿನ ನೀರಿಗಾಗಿ ಎಲ್ಲಾ ಮುಸ್ಲಿಂ ಬಂದವರೆಲ್ಲರೂ ಸೇರಿ ದುವಾ ಮಾಡಿ ಬೋರ್ ಕೊರೆಯಲಾಯಿತು.
ಈ ಸಂದರ್ಭದಲ್ಲಿ ಮದೀನಾ ಮಸೀದಿಯ ಅಧ್ಯಕ್ಷರಾದ ಅಲೀಂ ಭಾಷಾ, ನಯಾಜ್ ಮೆಕ್ಯಾನಿಕ್, ಖಾದರ್ ವಲಿ ನವಾಜ್ ಎಸ್ ಪಿ, ಸಾಧಿಕ್ ಸೈಬರ್, ಮುನ್ನ ಸ್ಟುಡಿಯೋ, ಮಾಭಾಷಾ, ಚಾಂದ್ ಭಾಷಾ ಇಮ್ರಾನ್, ರಿಜ್ವಾನ್ ಹಾಗೂ ಮಸೀದಿಯ ಸಿಬ್ಬಂದಿಗಳು ಹಾಗೂ ಸದಸ್ಯರು ಹಾಜರಿದ್ದರು.
ವರದಿ :ಯಾರಬ್. ಎಂ.