ಮೈಸೂರು : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕೇವಲ ಮುಸ್ಲಿಂರಿಗೆ ಮಾತ್ರ ಸೀಮಿತ ಎಂದು ಪುನರುಚ್ಚರಿಸುವ ಮೂಲಕ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
ಮೈಸೂರಲ್ಲಿ ಮಾತಾಡಿದ ಅವ್ರು, ಮುಸ್ಲಿಂ ಬಜೆಟ್ ಈ ರೀತಿ ಹೇಳಿರುವುದರಲ್ಲಿ ಯಾವ ತಪ್ಪಿದೆ?ಇದೊಂದು ಹಲಾಲ್ ಬಜೆಟ್ ಮುಸ್ಲಿಮರಿಗೆ 4500 ಕೋಟಿ ಹಣ ನೀಡಿದ್ದೀರಿ. ಅಲ್ಪಸಂಖ್ಯಾತರ ಶಾಲೆಗಳಿಗೆ ನೀಡಿದ್ದೀರಿ.
ರಾಜ್ಯದ ಬಜೆಟ್‌ನಲ್ಲಿ ಶೇಕಡ 1ರಷ್ಟು ಇಲ್ಲ ಎನ್ನುತ್ತೀರಿ. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಸಾಬ್ರು ಬಿಟ್ಟರೇ ಬೇರೆ ಯಾರು ಕಾಣೋದಿಲ್ವಾ?ವೀರಶೈವ, ಲಿಂಗಾಯತ, ಒಕ್ಕಲಿಗ, ಅಂಬಿಗರು, ಸವಿತಾ ಸಮಾಜಗಳ ಅಭಿವೃದ್ಧಿಗೆ ಯಾವುದಕ್ಕೆ ನೀವು ಹಣ ನೀಡಿದ್ದೀರಿ ಹೇಳಿ? ಎಂದು ಪ್ರಶ್ನಿಸಿದರು .
ರಾಜ್ಯದ ದೇವಾಲಯಗಳ ಹಣವನ್ನು ಧರ್ಮದ ಆಧಾರದ ಮೇಲೆ ನೀಡಿ.ಜಾತಿ ಗಣತಿಯನ್ನು ಜಾತಿ ಮೇಲೆ ಮಾಡುವುದಾದರೆ ಧರ್ಮದ ಆಧಾರದ ಮೇಲೆ ಧರ್ಮದ ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲ್ ಹಾಕಿದರು.
ಸಿಎಂ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ.ಡಿಸಿಎಂ ಗೂಂಡಾ ಸರ್ಕಾರ ನಡೆಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.ಡಿ. ಕೆ. ಶಿವಕುಮಾರ್ ಅವರೇ ಕರ್ನಾಟಕ ಏನು ನಿಮ್ಮ ರಿಯಲ್ ಎಸ್ಟೇಟ್ ಆಫೀಸಾ ?ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ.ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು ಸುದೀಪ್, ಶಿವಣ್ಣ, ಯಶ್ ಏನು ನಿಮ್ಮ ಪಾರ್ಟಿ ಕಾರ್ಡ್ ಹೋಲ್ಡರ್ ಗಳಾ?ಈಗ ನೀವು ಮೇಕೆದಾಟು ಯಾತ್ರೆ ಮಾಡಿ ನಾನು ಕೂಡ ಹೋರಾಟಕ್ಕೆ ಬರ್ತೀನಿ. ನಮ್ಮ ಕಾರ್ಯಕರ್ತರೂ ಬರ್ತೀವಿ. ಕಾಂಗ್ರೆಸ್ ಬಾವುಟ ಇಲ್ಲದೇ ಯಾತ್ರೆ ಮಾಡಿ ನಾವೆಲ್ಲರೂ ಬರ್ತೀವಿ ಎಂದು ಪ್ರತಾಪ್ ಸಿಂಹ ಹೇಳಿದರು.