ಯಾದಗಿರಿ: ಬೈಕ್ ಖರೀದಿಸಲು ಹಣ ಕೊಡದ ಕಾರಣ ತಂದೆಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ನಡೆದಿದೆ.
ಮಗ ಶೇಖರ್ ಕೊಲೆ ಆರೋಪಿ. ತಂದೆ ಚೆನ್ನಾರೆಡ್ಡಿ ರಾಥೋಡ್(50) ಅವರನ್ನು ಶೇಖರ್ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಳ್ಳಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ಕೊಲೆ ಮಾಡಿದ್ದಾನೆ.
ತಂದೆಯನ್ನು ಕೊಲೆ ಮಾಡಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆಂದು ನಾಟಕವಾಡಿದ್ದಾನೆ. ಅಜ್ಜಿಯ ಜೊತೆ ಠಾಣೆಗೆ ದೂರು ಕೊಡಲು ಹೋಗಿದ್ದ ಶೇಖರ್ ಲಾಕ್ ಆಗಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.