Ad imageAd image

ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭ

Bharath Vaibhav
ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭ
WhatsApp Group Join Now
Telegram Group Join Now

ಚಿಕ್ಕೋಡಿ : ಗುರುವಾರ ಪೇಟೆ 350 ಮೀಟರ 34 ಫೀಟ್ ಅಗಲ .ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆ ಮಧ್ಯ ಸೇತುವೆಯಿಂದ ಅಂಕಲಿ ಖೂಟದವರೆಗೆ ಸುಮಾರು 350 ಮೀಟರ ಉದ್ದ ಹಾಗೂ 34 ಫೀಟ್ ಅಗಲ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು ಇದು ಚಿಕ್ಕೋಡಿ ಜನರಲ್ಲಿ ಸಂತೋಷ ಮೂಡಿಸಿದೆ.

ಸುಮಾರು ವರ್ಷಗಳಿಂದ ಚಿಕ್ಕೋಡಿ ಪಟ್ಟಣದ ಈ ಗುರುವಾರಪೇಟೆ ರಸ್ತೆ ಕೇವಲ 20 ಫೀಟ್ ಆಗಿತ್ತು ಇದು ವಾಹನಗಳು ಮೋಟರ್ ಸೈಕಲ ಸಂಚರಿಸಲು ಸಂಚರಿಲು ಮತ್ತು ವ್ಯಾಪಾರಸ್ಥರ ವೈವಾಟುಗಳಿಗೆ ತುಂಬಾ ತೊಂದರೆಯಾಗಿತ್ತು ಆದರೆ ಸರ್ಕಾರದ ನಿರ್ಧಾರ ಜಿಲ್ಲಾಧಿಕಾರಿ ಆದೇಶ ಲೋಕ ಉಪಯೋಗಿ ಇಲಾಖೆ ಹಾಗೂ ಚಿಕ್ಕೋಡಿ ಪುರಸಭೆ ಹಾಗೂ ಸಂಬಂಧಪಟ್ಟ ಶಾಸಕರ ಪ್ರಯತ್ನದಿಂದ ರಸ್ತೆ ಅಗಲೀಕರಣ ಕನಸು ನನಸಾಗುತ್ತಿದೆ.

ಇದೇ ವಿಷಯವನ್ನು ಕುರಿತು ನಮ್ಮ ವಾಹಿನಿಯ ರಿಪೋರ್ಟರ್ ಶ್ರೀ ರಾಜು ಮುಂದೆ ಚಿಕ್ಕೋಡಿ ಊರು ಸಭೆಯ ಮುಖ್ಯ ಅಧಿಕಾರಿಯವರಿಗೆ ಪ್ರಶ್ನಿಶಿಸಿದಾಗ ಅವರು ಹೇಳಿದ್ದು ಹೀಗೆ.

ತುಂಬಾ ವರ್ಷಗಳಿಂದ ಜನರ ಹಾಗೂ ವಾಹನ ಸಂಚಾರಕರ ಮತ್ತು ವ್ಯಾಪಾರಸ್ಥರ ಇದು ಬೇಡಿಕೆಯಾಗಿತ್ತು ಈ ಸಣ್ಣರಸ್ತೆ ದೊಡ್ಡ ಗಾತ್ರಕ್ಕೆ ಅಗಲೀಕರಣವಾಗಬೇಕು ವ್ಯಾಪಾರಸ್ಥರಿಗೆ ಹಾಗೂ ಸಂಚಾರಿಕರಿಗೆ ಅನುಕೂಲವಾಗಬೇಕು ಎಂಬ ಬೇಡಿಕೆ ಸುಮಾರು ವರ್ಷಗಳಿಂದ ಇತ್ತು.

ಅದು ಈಗ 2025 ರಲ್ಲಿ ಅದು ಪ್ರಾರಂಭಗೊಂಡಿದೆ ಸುಮಾರು 151 ಮಾಲೀಕರ ಒಪ್ಪಿಗೆಯೊಂದಿಗೆ ಉಪಯೋಗಿಸಿ ಇಲಾಖೆ ಇವರು ಹಣದ ವ್ಯವಹಾರ ನಿರ್ವಹಿಸಲಿದ್ದು ಮಾಲೀಕರ ವ್ಯವಹಾರ ಮುಕ್ತಾಯಗೊಂಡ ನಂತರ ಮತ್ತೆ ಮೊದಲಿನಂತೆ ಪುರಸಭೆಯ ಹತೋಟಿಯಲ್ಲಿ ಎಲ್ಲ ಕೆಲಸ ಕಾಮಗಾರಿ ನಿಯಂತ್ರಿಸಲಾಗುವುದು ಅಲ್ಲಿಯವರೆಗೆ ನಾವು ಕೇವಲ ಸ್ವಚ್ಛತೆಯನ್ನು ಮಾತ್ರ ಕಾಪಾಡಿಕೊಳ್ಳುತ್ತೇವೆ ಮತ್ತು ಇದಕ್ಕೆ ಸಹಕರಿಸಿದ ಎಲ್ಲ ಚಿಕ್ಕೋಡಿ ನಾಗರಕರಿಗೆ ತುಂಬಾ ತುಂಬಾ ಧನ್ಯವಾದಗಳುನ್ನು ತಿಳಿಸಿದರು.

ಚಿಕ್ಕೋಡಿ ಒಂದು ಶೈಕ್ಷಣಿಕ ಜಿಲ್ಲೆಯಾಗಿ ಸುಂದರ ನಗರಗಳಿoದ ಬೆಳೆದು ಲಕ್ಷಾಂತರ ಜನರಿಗೆ ಸಹಾಯ ಸಹಕಾರ ವಾಗಲಿ ಎಂದು ನಮ್ಮ ವಾಹಿನಿಯ ಬೇಡಿಕೆ.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!