Ad imageAd image

ನಾಳೆ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

Bharath Vaibhav
ನಾಳೆ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ
WhatsApp Group Join Now
Telegram Group Join Now

ನಿಪ್ಪಾಣಿ:  ನಾಳೆ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಮುಖ್ಯ ಉಪಸ್ಥಿತಿ.

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಶಿವಾಜಿ ವೃತ್ತದಲ್ಲಿ ಸೋಮವಾರ ದಿನಾಂಕ 17ರಂದು ಸಾಯಂಕಾಲ 5:00 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಡ ಪ್ರತಿಮೆ ಅನಾವರಣ ನಡೆಯಲಿದ್ದು ಬೆಳಿಗ್ಗೆ ಮಹಿಳೆಯರಿಂದ ವಿವಿಧ ವಾದ್ಯಗಳ ಮಧ್ಯೆ ಜಲ ಹಾಗೂ ಅಂಬಲಿ ಕಲಶಗಳೊಂದಿಗೆ ಮೆರವಣಿಗೆ ಹೊರಡಲಿದೆ ಎಂದು ಸಮಸ್ತ ಮರಾಠಾ ಸಮಾಜದ ಪ್ರಮುಖ ಕುಮಾರ ಮಾನೆ ಹಾಗೂ ಅನಿಲ ಮಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ನಡೆಯಲಿರುವ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬೆಳಿಗ್ಗೆ ವಿಧಿಪೂರ್ವಕ ಹೋಮ ಹವನಗಳು ನಡೆಯಲಿದ್ದು ಮಧ್ಯಾಹ್ನ 1:00ಗೆ ಪಟ್ಟಣದ ಕುಂದ ಕುಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರು 25 ಲಕ್ಷ ರೂಪಾಯಿ ಖರ್ಚಿನಿಂದ ತಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಪಟ್ಟಣದ ಶಿವಾಜಿ ವೃತ್ತದಲ್ಲಿ ಈಗಾಗಲೇ ಅಶ್ವರೂಢ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತಂದು ಇಡಲಾಗಿದ್ದು ಸಾಯಂಕಾಲ 5 ಗಂಟೆಗೆ ಪ್ರತಿಮೆ ಅನಾವರಣ ಸಮಾರಂಭ ನಡೆಯಲಿದೆ.

ಸಮಾರಂಭದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿಯವರು ಅಧ್ಯಕ್ಷತೆ ವಹಿಸಲಿದ್ದು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಶಾಸಕ ಸತೇಜ ಪಾಟೀಲ KLE ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್ ಕಾಕಾಸಾಹೇಬ್ ಪಾಟೀಲ್ ಉತ್ತಮ್ ಪಾಟೀಲ್ ದಾದಾರಾಜೆ ನಿಂಬಾಳ್ಕರ ಮಾದವರಾವ ಘಾಟಗೆ ಸ್ವರೂಪ ಮಹಾಡಿಕ, ಅಜಿತ್ ಸಿಂಗ ನಿಂಬಾಳ್ಕರ್ ಡಾಕ್ಟರ್ ಶ್ರದ್ದಾನಂದ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಹಾಗೂ ಸಮಸ್ತ ಶಿವ ಪ್ರೇಮಿಗಳ ಸುತ್ತಲಿನ ಹಳ್ಳಿಗಳ ಮರಾಠ ಸಮಾಜದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕುಮಾರ ಮಾನೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಾಳ ಸಾಹೇಬ ಪಾಟೀಲ ಮೋಹನ ಮೋಹನ ಶಿತೊಳೆ,ಗಜಾನನ ಪಾಟೀಲ, ರಮೇಶ್ ಮಾನೆ ಅನಿರುದ್ಧ ಪಾಟೀಲ ಸಿರೀಶ್ ಅಡಕೆ, ರಾಜು ಅಮೃತ ಸಮಣ್ಣವರ ಶುಭಂ ಸಾಳುಂಕೆ ಉಪಸ್ಥಿತರಿದ್ದರು.

 ಮಹಾವೀರ ಚಿಂಚಣೆ

WhatsApp Group Join Now
Telegram Group Join Now
Share This Article
error: Content is protected !!