Ad imageAd image

ಮದುವೆಯಾದ ಮೂರೇ ವಾರದಲ್ಲಿ ಗಂಡನನ್ನ ಹತ್ಯೆಗೈದ ಪತ್ನಿ

Bharath Vaibhav
ಮದುವೆಯಾದ ಮೂರೇ ವಾರದಲ್ಲಿ ಗಂಡನನ್ನ ಹತ್ಯೆಗೈದ ಪತ್ನಿ
WhatsApp Group Join Now
Telegram Group Join Now

ಸಾಂಗ್ಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ರಾಜ್ ರಘುವಂಶಿ ಹನಿಮೂನ್ ಕೊಲೆ ಪ್ರಕರಣದ ಬಳಿಕ ಇದೀಗ ಮಹಾರಾಷ್ಟ್ರದಲ್ಲಿ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ.

ಮಹಿಳೆಯೊಬ್ಬಳು ಮದುವೆಯಾದ ಕೇವಲ ಮೂರು ವಾರಗಳಲ್ಲಿ ತನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾಳೆ.ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮೃತ ಅನಿಲ್ ಲೋಖಂಡೆ ಮೇ 23ರಂದು ಆರೋಪಿ ರಾಧಿಕಾ ಜೊತೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹವಾಗಿದ್ದರು.

ಮದುವೆಯಾಗಿ ಮೂರು ವಾರ ಕಳೆಯುತ್ತಿದ್ದಂತೆ ಇಬ್ಬರ ಮಧ್ಯೆ ಮನಸ್ತಾಪ ಆರಂಭವಾಗಿದ್ದು, ಜೂನ್ 10ರ ರಾತ್ರಿ ಕೂಡ ಇಬ್ಬರು ಜಗಳವಾಡಿದ್ದಾರೆ.

ಜಗಳದ ಬಳಿಕ ಪತಿ ಅನಿಲ್ ಲೋಖಂಡೆ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಕೋಪದಲ್ಲಿದ್ದ ಪತ್ನಿ ಕೊಡಲಿಯಿಂದ ಪತಿಯ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾಳೆ. ಗಂಡ ಸತ್ತ ನಂತರ ತನ್ನ ಸಹೋದರನಿಗೆ ಕರೆ ಮಾಡಿ ಕೊಲೆಯ ವಿಚಾರ ತಿಳಿಸಿದ್ದಾಳೆ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ಧ ಬಿಎನ್‌ಎಸ್ (ಕೊಲೆ) ಸೆಕ್ಷನ್ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ರಾಧಿಕಾ ಪತಿ ಅನಿಲ್‌ನನ್ನು ಕೊಲೆ ಮಾಡಲು ಅಸಲಿ ಕಾರಣ ಏನು ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ.

WhatsApp Group Join Now
Telegram Group Join Now
Share This Article
error: Content is protected !!