ಮಹಾರಾಷ್ಟ್ರ : ಪರಮಪೂಜ್ಯ ಯುಗಶ್ರೇಷ್ಟ ತಪಸ್ವಿ ಸಾಮ್ರಾಟ ಆಚಾರ್ಯ 108 ಸನ್ಮತಿ ಸಾಗರ ಜಿಯವರ ಮುನಿ ಸಂಘದಲ್ಲಿ ಜ್ಞಾನ ಪಡೆದ ಹಾಗೂ ಪರಮಪೂಜ್ಯ ಚತುರ್ಥ ಪಟ್ಟಾಧೀಶ ಆಚಾರ್ಯ 108 ಸುನಿಲ್ ಸಾಗರಜೀ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದ ಸುಯೋಗ್ಯ ಶಿಷ್ಯೆ ಆರ್ಯಿಕಾ ಋತುಮತಿ ಮಾತಾಜಿಯವರು ಗುರುವಂದನೆಗೋಸ್ಕರ ವಿಹಾರದೊಂದಿಗೆ ಮುಂಬೈಯಿಂದ ದಾಹೋದ ಕಡೆಗೆ ಸಾಗುತ್ತಿದ್ದಾಗ ಗುರುವಾರ ಬೆಳಿಗ್ಗೆ 7ಗಂಟೆಗೆ ಹಿಂಬದಿಯಿಂದ ಶರವೇಗದಲ್ಲಿ ಬಂದ ವಾಹನ ಮಾತಾಜಿಯವರಿಗೆ ಡಿಕ್ಕಿ ಹೊಡೆದಿದ್ದರಿಂದ ಮಾತಾಜಿ 300 ಅಡಿಗಳಷ್ಟು ಕೊಚ್ಚಿಕೊಂಡು ಹೋಗಿ ಸ್ಥಳದಲ್ಲಿಯೇ ಸಮಾಧಿ ಮರಣ ಹೊಂದಿದ ಘಟನೆ ಸಂಭವಿಸಿದೆ. ಮಾತಾಜಿಯವರು ಮುಂಬೈಯಿಂದ ವಿಹಾರ ಮಾಡುತ್ತಾ ಆಚಾರ್ಯ ಭಗವಂತನ ದರ್ಶನಕ್ಕಾಗಿ ದಾ ಹೂದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಮಾತಾಜಿಯ ಜೊತೆಗೆ ಸಾಗುತ್ತಿದ್ದ ಮತ್ತೋರ್ವ ಸೇವಕನು ಸಹ ಮೃತಪಟ್ಟಿದ್ದಾನೆ. ಘಟನೆ ಯಿಂದಾಗಿ ಇಡೀ ಜೈನ ಮುನಿಗಳ ಹಾಗೂ ಸಮಸ್ತ ಜೈನ ಸಮಾಜದ ಶ್ರಾವಕ ಶ್ರಾವಕಿಯರಲ್ಲಿ ಸಂತಾಪ ಹಾಗೂ ದುಃಖ ಅಮ್ಮ.
ವರದಿ: ಮಹಾವೀರ ಚಿಂಚಣೆ