Ad imageAd image

‘ಮಹಿಳೆಯರ ಆರ್ಥಿಕ ಜ್ಞಾನ ಮತ್ತು ಸಬಲೀಕರಣಕ್ಕೆ ಎಲ್ಲರ ಸಹಕಾರ ಅಗತ್ಯ’

Bharath Vaibhav
‘ಮಹಿಳೆಯರ ಆರ್ಥಿಕ ಜ್ಞಾನ ಮತ್ತು ಸಬಲೀಕರಣಕ್ಕೆ ಎಲ್ಲರ ಸಹಕಾರ ಅಗತ್ಯ’
WhatsApp Group Join Now
Telegram Group Join Now

ಮೊಳಕಾಲ್ಮೂರು: ಮಹಿಳೆಯರ ಆರ್ಥಿಕ ಜ್ಞಾನ ಮತ್ತು ಸಬಲೀಕರಣ ಹೊಂದಿದ ಸಮಾಜ ನಿರ್ಮಾಣ ಮಾಡಲು ಎಲ್ಲರು ಸಹಕಾರ ನೀಡಬೇಕು. ಪಿ ಎಸ್ ಐ ..ಮಹೇಶ್, ಹೊಸಪೇಟೆ. ಪಟ್ಟಣದ ವರವಲಯದಲ್ಲಿರುವ ಶಾದಿ ಮಹಲ್ ನಲ್ಲಿ ಗ್ರಾಮೀಣ ಕೂಟ ಮತ್ತು ಕ್ರೆಡಿಟ್ ಆಕ್ಸಿಸ್ ಇಂಡಿಯಾ ಪೌಂಡೇಶನ್ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಾರ ನಡೆಯಿತು.

ಮೊಳಕಾಲ್ಮೂರು:-ಮಹಿಳೆಯರ ಆರ್ಥಿಕ ಜ್ಞಾನ ಮತ್ತು ಸಬಲೀಕರಣ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಅದೇ ರೀತಿ ಸಾಮಾಜಿಕ ಜಾಲತಾಣಗಳಿಂದ ಫೈನಾನ್ಸ್ ಕಂಪನಿಗಳ ಬಗ್ಗೆ ಎಚ್ಚರವಿರಲಿ ಎಂದು ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆಯವರು ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಗ್ರಾಮೀಣ ಸಮುದಾಯಗಳ ಆರ್ಥಿಕ ಮತ್ತು ಗ್ರಾಮೀಣ ಕೂಟ ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಶನ್ ಮೊಳಕಾಲ್ಮೂರು ಶಾಖೆ ಇವರ ನೇತೃತ್ವದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಂಚಕರು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಮೆಸೇಜುಗಳನ್ನು ಕಳಿಸಿ ನಿಮ್ಮನ್ನು ವಂಚಿಸುತ್ತಾರೆ. ಇದರ ಬಗ್ಗೆ ಎಚ್ಚರವಾಗಿರಬೇಕು ಅಂತಹ ವಂಚನೆ ಕಂಡು ಬಂದಲ್ಲಿ ತಕ್ಷಣ ನಿಮ್ಮ ಹತ್ತಿರ ಇರುವ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲು ಮಾಡಬೇಕು.

ಗ್ರಾಮೀಣ ಕೂಟ ಮತ್ತು ಕ್ರೆಡಿಟ್ ಆಕ್ಸಿಸ್ ಇಂಡಿಯಾ ಪೌಂಡೇಶನ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಗಾರದಲ್ಲಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಮೈಕ್ರೋ ಫೈನಾನ್ಸ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಾಲ ಪಡೆದು, ಉತ್ತಮ ಜೀವನ ನಡೆಸಬೇಕು ಫೈನಾನ್ಸ್ ವಿಚಾರದಲ್ಲಿ ಮೋಸ ಹೋಗಬಾರದು ಎಂದರು.

ಇದೇ ಸಂದರ್ಭದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟದ ವಿಭಾಗಿಯ ವ್ಯವಸ್ಥಾಪಕರಾದ ಶಿವಲಿಂಗಯ್ಯ ಎಚ್ ಕೆ ಇವರು ಮಾತನಾಡಿ ಈ ಕಾರ್ಯಗಾರದಲ್ಲಿ ಪ್ರತಿಯೊಬ್ಬ ಮಹಿಳೆಯು ಕೂಡ ಸಂಘದ ವಿಚಾರದಲ್ಲಿ ಜಾಗೃತರಾಗಿರಬೇಕು ಅಗತ್ಯಕ್ಕೆ ತಕ್ಕಂತೆ ಸಾಲ ಮಾಡಬೇಕು ಸಾಲ ಮಾಡಿದ ನಂತರ ಮರುಪಾವತಿ ಕೂಡ ಉತ್ತಮವಾಗಿ ಇರಬೇಕು ಎಂದರು. ಗ್ರಾಮೀಣ ಕುಟುಂಬಗಳ ಹಣಕಾಸು ಶಿಕ್ಷಣದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮಹಿಳೆಯರು ಆರ್ಥಿಕ ಜ್ಞಾನ ಮತ್ತು ಸಬಲೀಕರಣ ಹೊಂದಿದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು ಗ್ರಾಮೀಣ ಕೂಟ ಭಾರತದ ಪ್ರಮುಖ ಮೈಕ್ರೋ ಫೈನಾನ್ಸ್ ಸಂಸ್ಥೆಯಾಗಿದೆ ಈ ಸಂಸ್ಥೆಯ ಪ್ರಮುಖವಾಗಿ ಮಹಿಳಾ ಗ್ರಾಹಕರಿಗೆ ಸಣ್ಣ ಸಾಲಗಳನ್ನು ನೀಡುತ್ತಿದೆ. ದೇಶದ ಅಲ್ಪಸಂಖ್ಯಾತ ಹಾಗೂ ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. ಈ ಸಂಸ್ಥೆಯು ಪೌಂಡೇಶನ್ ನೂರು ಪರ್ಸೆಂಟ್ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ನ ಸಹಾಯಕ ಸಂಸ್ಥೆಯಾಗಿದ್ದು ಶಿಕ್ಷಣ ಆರೋಗ್ಯ ಜೀವನ ಅಪಾಯ ಗ್ರಾಮೀಣ ಅಭಿವೃದ್ಧಿ ಮತ್ತು ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ಸುಮಾರು 26 ವರ್ಷಗಳಿಂದ ಕರ್ನಾಟಕದ ಅತ್ಯಂತ ಮತ್ತು ಇತರೆ ವಲಯಗಳಲ್ಲಿ ಸಾಲ ನೀಡುತ್ತಾ ಬಂದಿದ್ದೇವೆ. ಈ ಸಂಸ್ಥೆಯು ಮಹಿಳೆಯರಿಂದ ಉತ್ತಮ ಪ್ರತಿಕೆಯೇ ನೀಡುತ್ತಿದ್ದಾರೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ವಿಡಿಯೋ ಮೂಲಕ ಸಂಸ್ಥೆಯ ವಿಚಾರವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕರಾದ ಮಂಜುನಾಥ್, ಐ ಎಂ ಸಿಬ್ಬಂದಿಗಳಾದ ಚಂದ್ರಶೇಖರ್, ದಿಲೀಪ್, ಚಲಪತಿ, ಪ್ರಕಾಶ್, ಜಗದೀಶ್, ಶಿವಕುಮಾರ್ , ನಾಗರಾಜ್, ಹೆಲ್ತ್ ಇನ್ಸ್ಪೆಕ್ಟರ್ ಮಾರತಮ್ಮ, ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟದ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ

 

WhatsApp Group Join Now
Telegram Group Join Now
Share This Article
error: Content is protected !!