ಬೆಂಗಳೂರು: ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಭಾರತದಾದ್ಯಂತ ಜಾರಿಗೊಂಡಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಮತ್ತೊಂದು ಗಡುವು ಮುಗಿಯುವ ಸಮಯ ಬರುತ್ತಿದೆ. ಅದರಲ್ಲೂ ನವೆಂಬರ್ನಲ್ಲಿ ನಂಬರ್ಪ್ಲೇಟ್ ಅನ್ನು ಅಳಪಡಿಸುವ ಗಡುವನ್ನು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ನೀಡಿದೆ.
ಗಡುವು ನೀಡಿಯೇ ಒಂದೂವರೆ ತಿಂಗಳು ಕಳೆದಿದ್ದು, ನವೆಂಬರ್ 30 ರೊಳಗೆ ಗಡುವು ಮುಗಿಯಲಿದೆ. ಈ ದಿನಾಂಕದೊಳಗೆ ಎಲ್ಲಾ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ನಂಬರ್ ಪ್ಲೇಟ್ ಅನ್ನು ಬದಲಿಸಿಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಕರ್ನಾಟಕ ಸಾರಿಗೆ ಇಲಾಖೆ ನೀಡಿದೆ. ಇದಕ್ಕೆ ಇನ್ನು 25 ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ.