Ad imageAd image

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿದೆ ಕೆಕೆಆರ್

Bharath Vaibhav
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿದೆ ಕೆಕೆಆರ್
WhatsApp Group Join Now
Telegram Group Join Now

ಕೋಲ್ಕತ್ತಾ: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆರೆಲು ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ  ಈಗಾಗಲೇ ಪಂದ್ಯಾವಳಿಯಿಂದ ನಿರ್ಗಮಿಸಿದೆ. ಈ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ದೃಷ್ಠಿಯಿಂದ ಮಾತ್ರ ಮಹತ್ವದ್ದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಈ ಪಂದ್ಯಕ್ಕೆ ಮುನ್ನ 11 ಪಂದ್ಯಗಳನ್ನು ಆಡಿದೆ.  5 ರಲ್ಲಿ ಗೆಲುವು, 5 ರಲ್ಲಿ ಸೋಲು            ಒಂದು ಪಂದ್ಯ ಅನಿರ್ನಿತ ಹೀಗಾಗಿ ಒಟ್ಟು 11 ಅಂಕಗಳನ್ನು ಗಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಿಂದ ಕೇವಲ 2 ರಲ್ಲಿ ಗೆದ್ದು 4 ಅಂಕಗಳೊಂದಿಗೆ ಕಡೆಯ ಸ್ಥಾನದಲ್ಲಿದೆ. ಪಂದ್ಯ ಸಾಯಂಕಾಲ 7: 30 ಕ್ಕೆ ಆರಂಭವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!