Ad imageAd image

ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕಶಾಸ್ತಿ

Bharath Vaibhav
ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕಶಾಸ್ತಿ
WhatsApp Group Join Now
Telegram Group Join Now

ಬೆಂಗಳೂರು : ಕಾಶ್ಮೀರದ ಪಹಟ್ನಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವುದು ಆಪರೇಷನ್ ಸಿಂಧೂರ ಕೇವಲ ದಾಳಿಯಲ್ಲಿ, ಇದು ಭಾರತದ ಸಾರ್ವಭೌಮತ್ವದ ಸಂಕೇತ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಭೀತ ನಾಯಕತ್ವಕ್ಕೆ ಅವರು ಧನ್ಯವಾದಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ ಅವರು ತಿಳಿಸಿದರು.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಅಪರೇಷನ್ ಸಿಂಧೂರ್” ಇದು ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಬ್ಬಿದ ರಾಷ್ಟ್ರೀಯ ಸಿಂಧೂರ, ಭಾರತ ಹೊಡೆದಾಗ ಜಗತ್ತು ನೋಡುತ್ತದೆ… ಮತ್ತು ಸ್ವಲ್ಪ ನಡುಗುತ್ತದೆ ಎಂದರು. ಭಾರತೀಯ ಸೇವೆಯ ಧೈರ್ಯ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ನಿರ್ಭೀತ ನಾಯಕತೃಕ್ಕೆ ನನ್ನ ನಮನಗಳು. ನವಭಾರತವು ಎಚ್ಚರಿಸುವುದಷ್ಟೇ ಅಲ್ಲ, ಅದು ನಮ್ಮ ಕರ್ತವ್ಯ ನಿರ್ವಹಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇವೆ ಯಶಸ್ವಿಯಾಗಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಇನ್ನೂ ಬಿಜೆಪಿ ಪಾಸಕರಾದ ಸುನೀಲ್‌ ಕುಮಾರ್ ಅವರು ಮಾತನಾಡಿ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆಗಳು ಕಳದ ತಡರಾತ್ರಿ ನಡೆಸಿದ ಏರ್ ಸ್ಟೈಕ್ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ನೀಡಿದ ದಿಟ್ಟ ಪ್ರತಿಕಾರ. ಈ ದಾಳಿಯಲ್ಲಿ ನೂರಾರು ಉಗ್ರರು ಹತರಾಗಿದ್ದು ಭಾರತದ ಜತೆಗೆ ಪಾಕಿಸ್ತಾನ ಇನ್ನೊಂದು ಕುಚೋದ್ಯ, ನೀಡದಂತೆ ಪಟ್ಟು ನೀಡಲಿ ಎಂದು ಆಶಿಸುತ್ತೇವೆ. ದೇಶ ಈಗ ಯುದ್ಧದಂಥ ಸ್ಥಿತಿಯನ್ನು ಎದುರಿಸುತ್ತಿದ್ದು ದೇಶದೊಳಗೂ ಕೆಲ ವಿಚ್ಛಿದ್ರಕಾರಿ
ಮನಸುಗಳು ವಿಷಕಕ್ಕುವ ಕೆಲಸ ಮಾಡಬಹುದು. ಇವರ ಬಗ್ಗೆ ಜಾಗೃತರಾಗಿರುತ್ತಾ, ಕೇಂದ್ರ ಸರ್ಕಾರ ನೀಡುವ ಭದ್ರತಾ ಸೂಚನೆಗಳನ್ನ ಪಾಲಿಸುತ್ತಾ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ಜತೆಗೆ ಗಟ್ಟಿಯಾಗಿ ವಿಲೋಣ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!