Ad imageAd image

ವಿಶ್ವದ ಸುಂದರಿ ಪಟ್ಟ ಅಲಂಕರಿಸಿದ ಥೈಲ್ಯಾಂಡ್‌ ಮೂಲದ ಯುವತಿ 

Bharath Vaibhav
ವಿಶ್ವದ ಸುಂದರಿ ಪಟ್ಟ ಅಲಂಕರಿಸಿದ ಥೈಲ್ಯಾಂಡ್‌ ಮೂಲದ ಯುವತಿ 
WhatsApp Group Join Now
Telegram Group Join Now

ತೆಲಂಗಾಣ : ಇಲ್ಲಿನ ಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಓಪಲ್ ಸುಚಾತ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದ್ದಾರೆ.

ಥೈಲ್ಯಾಂಡ್‌ ಮೂಲದ ಸುಂದರಿ ಈ ಬಾರಿಯ ಮಿಸ್ ವರ್ಲ್ಡ್-2025 ವಿಜೇತರಾಗುವ ಮೂಲಕ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಈ ಸ್ಪರ್ಧೆಯಲ್ಲಿ ಗೆದ್ದ ವಿಶ್ವ ಸುಂದರಿಗೆ ಚಿನ್ನದಿಂದ ಮಾಡಿದ ವಜ್ರ ಖಚಿತ ಕೀರಿತವನ್ನು ತೊಡಿಸಲಾಗುತ್ತದೆ.

ಈ ಪ್ರತಿಷ್ಠಿತ ಮಿಸ್ ವರ್ಲ್ಡ್ ಕಿರೀಟ ಹಿಂದಿನ ಯಾವುದೇ ಕಿರೀಟಕ್ಕಿಂತ ಭಿನ್ನವಾಗಿದೆ.175.49 ಕ್ಯಾರೆಟ್‌ಗಳ 1,770 ವಜ್ರಗಳಿಂದ ಮಾಡಿದ, 18 ಕ್ಯಾರೆಟ್ ಬಿಳಿ ಚಿನ್ನದಲ್ಲಿ ಹೊಂದಿಸಲಾಗಿದೆ.

ಈ ಕಿರೀಟದ ಮೌಲ್ಯ ಸುಮಾರು ಮೂರು ಕೋಟಿ ರೂಪಾಯಿ ಎನ್ನಲಾಗುತ್ತದೆ.ಇದರ ಜೊತೆಗೆ ವಿಜೇತೆ ಓಪಲ್ ಸುಚಾತ ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಬಹುಮಾನವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!