Ad imageAd image

ಸಿಗದ ಅನುಮತಿ: ಕೆ.ಎಸ್.ಸಿ.ಎಗೆ ನಿರಾಶೆ

Bharath Vaibhav
ಸಿಗದ ಅನುಮತಿ: ಕೆ.ಎಸ್.ಸಿ.ಎಗೆ ನಿರಾಶೆ
WhatsApp Group Join Now
Telegram Group Join Now

ಬೆಂಗಳೂರು: ಡಿಸೆಂಬರ್ ೨೪ ರಂದು ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪಂದ್ಯವನ್ನು ನಡೆಸಲು ಅನುಮತಿ ನಿರಾಕರಿಸಿ ನಗರ ಪೊಲೀಸ್ ಕಮಿಷ್ನರ್ ಆದೇಶ ಹೊರಡಿಸುವ ಮೂಲಕ ರಾಜ್ಯ ಸರಕಾರದ ತರ‍್ಮಾನವನ್ನು ಪ್ರಕಟಿಸಿದ್ದಾರೆ.
ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ನಂತರ ನಡೆದ ವಿಜಯೋತ್ಸವ ಕರ‍್ಯಕ್ರಮ ಸಂರ‍್ಭದಲ್ಲಿ ಕಾಲ್ತುಳಿತ ಉಂಟಾಗಿ ೧೧ ಜನರು ಸಾವನ್ನಪ್ಪಿದ್ದರು. ನಂತರ ಈ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ.
ಕಾಲ್ತುಳಿತ ಘಟನೆ ನಂತರ ಮೊದಲ ಬಾರಿಗೆ ಕೆ.ಎಸ್.ಸಿಎ ವಿಜಯ ಹಜಾರೆ ಟ್ರೋಫಿ ಪಂದ್ಯಾವಳಿಯ ಲೀಗ್ ಪಂದ್ಯ ನಡೆಸಲು ರಾಜ್ಯ ಸರಕಾರದ ಬಳಿ ಅನುಮತಿ ಕೋರಿತ್ತು. ಪಂದ್ಯದ ವೇಳೆ ಪ್ರೇಕ್ಷಕರಿಗೆ ಅನುಮತಿ ನೀಡದೇ ಕೇವಲ ಪಂದ್ಯವನ್ನು ನಡೆಸುವ ಇಂಗೀತವನ್ನು ಕೆ.ಎಸ್.ಸಿ.ಎ ವ್ಯಕ್ತಪಡಿಸಿ ರಾಜ್ಯ ಸರಕಾರದ ಬಳಿ ಅನುಮತಿ ಕೋರಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!