Ad imageAd image

ಮ್ಯಾಟ್ರಿಕ್ಸ್ ಆಗ್ರೊ ಪ್ರೈವೆಟ ಲಿಮಿಟೆಡ್ ಕಂಪನಿ ಮಾಲೀಕರಿಗೆ ಪಂಗನಾಮ

Bharath Vaibhav
ಮ್ಯಾಟ್ರಿಕ್ಸ್ ಆಗ್ರೊ ಪ್ರೈವೆಟ ಲಿಮಿಟೆಡ್ ಕಂಪನಿ ಮಾಲೀಕರಿಗೆ ಪಂಗನಾಮ
WhatsApp Group Join Now
Telegram Group Join Now

ಚಿಂಚೋಳಿ : ಚಿಂಚೋಳಿ ಪಟ್ಟಣದ ಪೋಲ್ಕಪಳಿ ಹತ್ತಿರ ಇರುವ ಪವರ್ ಘಟಕ ಕಂಪನಿಯು ಸುಮಾರು 3 ವರ್ಷದಿಂದ ಕಂಪನಿಗೆ ಬೇಕಾಗುವಂತಹ ಕಚ್ಚಾವಸ್ತುಗಳನ್ನು ತರುವಂತ ಲಾರಿಗಳ ಮಾಲೀಕರಿಗೆ ತೊಗರಿ ಹೊಟ್ಟಿನ ಮಾಲೀಕರಿಗೆ ಹಾಗೂ ಟ್ರ್ಯಾಕ್ಟರ್ ಮಾಲೀಕರಿಗೆ ಒಳಗಡೆ ಕೆಲಸ ಮಾಡುವಂತಹ ಕಾರ್ಮಿಕರಿಗೆ ಹಣ ಕೊಡೋದನ್ನೇ ಸತಾಯಿಸುತ್ತಿದ್ದಾನೆ.

ಕೆಲವು ತಿಂಗಳ ಹಿಂದೆ ಕಂಪನಿ ಬೇರೊಬ್ಬರಿಗೆ ಮಾರಿ ಹೋಗುತ್ತಿದ್ದಾನೆ ಎಂಬ ಘಟನೆ ಈ ಮಾಲೀಕರಿಗೆ ಕಿವಿಗೆ ಬಿದ್ದಾಗ ದೂರು ಸುಮಾರು ದಿನಗಳಿಂದ ತಮಗೆ ಬರಬೇಕಾದ ಹಣವನ್ನು ಕೇಳುತ್ತಿದ್ದರೆ ರಾಜಾರೋಷವಾಗಿ ಧಮಕಿ ಹಾಕುತ್ತಿದ್ದಾನೆ ಎಂದು ಲಾರಿ ಮಾಲೀಕರು ಟ್ರ್ಯಾಕ್ಟರ್ ಮಾಲೀಕರು ತೊಗರಿ ಹೊಟ್ಟಿನ ಮಾಲೀಕರು ಮಾಧ್ಯಮದ ಮುಂದೆ ಹೇಳಿಕೊಳ್ಳುತ್ತಿದ್ದಾರೆ ಆ ಪವರ್ ಘಟಕಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಕೂಡ ಇದೇ ರೀತಿ ದಬ್ಬಾಳಿಕೆ ಮಾಡುತ್ತಿದ್ದಾನೆಂದು ಕಾರ್ಮಿಕರು ಹಾಗೂ ಮಾಲೀಕರು ಹೇಳುತ್ತಿದ್ದಾರೆ.

ವರದಿ : ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!