Ad imageAd image

ಇಲ್ಲಿಯೂ ಆರ್‌ಸಿಬಿ.. ಅಲ್ಲಿಯೂ ಆರ್‌ಸಿಬಿ.. ಎಲ್ಲಿ ನೋಡಿದರಲ್ಲಿ

Bharath Vaibhav
ಇಲ್ಲಿಯೂ ಆರ್‌ಸಿಬಿ.. ಅಲ್ಲಿಯೂ ಆರ್‌ಸಿಬಿ.. ಎಲ್ಲಿ ನೋಡಿದರಲ್ಲಿ
WhatsApp Group Join Now
Telegram Group Join Now

ಐಪಿಎಲ್‌ನ ೧೯ ನೇ ಏಡಿಷನ್‌ನಲ್ಲಿ ಪಾಲ್ಗೊಂಡಿರುವ ಎಲ್ಲ ಹತ್ತೂ ತಂಡಗಳ ಪೈಕಿ ಈಗ ಆರ್‌ಸಿಬಿ ಹವಾನೇ ಜಾಸ್ತಿ. ಎಲ್ಲಿ ನೋಡಿದರಲ್ಲಿ ಆರ್‌ಸಿಬಿ ಮಾತು ಬಲು ಜೋರು.
ಕಳೆದ ಬಾರಿ ಕಪ್ ಗೆದ್ದಾಗಿನಿಂದ ಹಿಡಿದು ಈ ವರೆಗೆ ಅಂದರೆ ಈ ೧೯ ನೇ ಎಡಿಷನ್‌ನ ಪ್ರತಿ ಪಂದ್ಯದ ಗೆಲುವಿನ ನಂತರವೂ ಆರ್‌ಸಿಬಿ ಜನಪ್ರಿಯತೆ ಹೆಚ್ಚುತ್ತಿದೆ.
ಇಲ್ಲಿಯೂ ಆರ್‌ಸಿಬಿ… ಅಲ್ಲಿಯೂ ಆರ್‌ಸಿಬಿ.. ಎಲ್ಲಿ ನೋಡಿದರಲ್ಲಿ ಆರ್‌ಸಿಬಿ ಎನ್ನುವಂತಾಗಿದೆ. ಈ ಕಂಬದಲ್ಲಿಯೂ
ಆರ್‌ಸಿಬಿ, ಆ ಕಂಬದಲ್ಲಿಯೂ ಆರ್‌ಸಿಬಿ, ಎಲ್ಲೆಲ್ಲಿಯೂ ಆರ್‌ಸಿಬಿ ಜಪ.


ಕಳೆದ ಬಾರಿ ಕಪ್ ಗೆದ್ದಾಗ ಸಂಭ್ರಮಿಸಿದ್ದ ಆರ್‌ಸಿಬಿ ಫ್ಯಾನ್ಸ್ ಈ ಬಾರಿ ಪ್ರತಿ ಲೀಗ್ ಪಂದ್ಯ ಗೆದ್ದಾಗಲೂ ಸಂಭ್ರಮಿಸುತ್ತಿದ್ದಾರೆ. ಪ್ರತಿ ಪಂದ್ಯ ಗೆದ್ದ ನಂತರ ಅಲ್ಲಲ್ಲಿಯ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂತಸದಲ್ಲಿ ತೇಲುತ್ತಿದ್ದಾರೆ.
ಆರ್‌ಸಿಬಿ ಗೆಲುವಿನ ಸಂಭ್ರಮ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ಹಳ್ಳಿ, ಹಳ್ಳಿಯಲ್ಲೂ ಗೆಲುವಿನ ಸಂಭ್ರಮ ಎದ್ದು ಕಾಣುತ್ತಿದೆ.
ಆರ್‌ಸಿಬಿ ಜರ್ಸಿ ತೊಟ್ಟ ಯುವಕರು: ಪ್ರತಿ ಗ್ರಾಮ, ಗ್ರಾಮದಲ್ಲಿಯೂ ಆರ್‌ಸಿಬಿ ಅಭಿಮಾನಿ ಯುವಕರು ಆರ್‌ಸಿಬಿ ಜರ್ಸಿ ತೊಟ್ಟು ಅಭಿಮಾನ ಮೆರೆಯುತ್ತಿದ್ದಾರೆ.
ಹಿಂದೆ ಬೀಳುತ್ತಿರುವ ಸೆಲೆಬ್ರೆಟಿಗಳು: ಆರ್‌ಸಿಬಿ ಜನಪ್ರಿಯತೆಗೆ ಮಾರು ಹೋದ ಸೀನೆಮಾ ನಟ, ನಟಿಯರು, ಸೆಲೆಬ್ರೆಟಿಗಳು ಆರ್‌ಸಿಬಿ ಪಂದ್ಯ ಇದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬರುತ್ತಿದ್ದಾರೆ. ನಾನು ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.
ಕಳೆದ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ನಟಿ ಪೂಜಾ ಗಾಂಧಿ ಆರ್‌ಸಿಬಿ ಆಡುತ್ತಿದೆ ಎನ್ನುವ ಕಾರಣಕ್ಕೆ ಪಂದ್ಯ ನೋಡಲು ಬಂದಿದ್ದೇ ಎಂದು ಅಭಿಮಾನದಿಂದ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!