ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣದ ಶಿಲೆಗಳಿಗೆ ಜಾಗತಿಕ ಮಟ್ಟದ ಮನ್ನಣೆ ದೊರೆತಿದೆ.
ಈ ಅದ್ಭುತ ಸುಣ್ಣದ ಶಿಲೆಗಳ (Limestone monoliths) ವಿಶಿಷ್ಟ ರಚನೆಯನ್ನು ಗುರುತಿಸಿರುವ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) , ಇವುಗಳನ್ನು ‘ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ’ Geo-Heritage Site) ಎಂದು ಅಧಿಕೃತವಾಗಿ ಘೋಷಿಸಿದೆ.
ಇದರಿಂದಾಗಿ ಯಾಣದ ಸಂರಕ್ಷಣೆ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಹೊಸ ವೇಗ ಸಿಕ್ಕಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಯಾಣದ ಶಿಖರಗಳಿಗೆ ಈಗ ಜಾಗತಿಕ ಮಟ್ಟದ ಮನ್ನಣೆ ದೊರೆತಿದೆ. ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI), ಯಾಣದ ಶಿಲೆಗಳನ್ನು ‘ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ’ ಎಂದು ಅಧಿಕೃತವಾಗಿ ಘೋಷಿಸಿದೆ.
ಜಿಎಸ್‌ಐ ಇಲಾಖೆಯ 176ನೇ ಸಂಸ್ಥಾಪನಾ ದಿನಾಚರಣೆಯ ನೆನಪಿಗಾಗಿ ಮಾರ್ಚ್ 6, 2026ರಂದು ಈ ಘೋಷಣೆಯ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಕುರಿತು ಜಿಎಸ್‌ಐ ಮಹಾನಿರ್ದೇಶಕ ಅಸಿತ್ ಸಹಾ ಅವರು ಏಪ್ರಿಲ್ 13ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಯಾಣದ ಈ ಅಪರೂಪದ ನೈಸರ್ಗಿಕ ನಿಧಿಯನ್ನು ಸಂರಕ್ಷಿಸಲು ಅಗತ್ಯವಾದ ಅಧಿಸೂಚನೆಯನ್ನು ಹೊರಡಿಸುವಂತೆ ಮತ್ತು ಈ ಪ್ರದೇಶದಲ್ಲಿ ಸುಸ್ಥಿರ ‘ಭೂ-ಪ್ರವಾಸೋದ್ಯಮ’ ಅಭಿವೃದ್ಧಿಪಡಿಸುವಂತೆ ಅವರು ಮನವಿ ಮಾಡಿದ್ದಾರೆ.




