ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿಗೆ ಅಪರಾಧ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಆ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಯಗಿದ್ದು, ಓಯೋ ರೂಮ್ ನಲ್ಲಿ ಪ್ರಿಯಕರನೇ ಪ್ರಿಯತಮೆಯನ್ನು ಕೊಲೆಗೈದಿದ್ದಾನೆ.
ಬೆಂಗಳೂರಿನ ಪೂರ್ಣ ಪ್ರಜ್ಞಾಲೇಔಟ್ ನ ಹೋಟೆಲ್ ಒಂದರ ಓಯೋ ರೂಮ್ ನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಮರ್ಡರ್ ಮಾಡಿದ್ದಾನೆ. ಹರಿಣಿ (36)ಎಂಬ ಯುವತಿಯನ್ನು ಪ್ರಿಯಕರ್ ಯಶಸ್ ಫಿನಿಷ್ ಮಾಡಿದ್ದಾನೆ.
ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯತಮೆ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.