ಮುಂಬೈ: ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಯೊಬ್ಬರಿಗೆ ಮರಾಠಿ ಮಾತನಾಡಲು ಬಾರದ ಕಾರಣ ಆರ್ಡರ್‌ಗೆ ಹಣ ನೀಡಲು ನಿರಾಕರಿಸುವ ಮೂಲಕ ದಂಪತಿ ಕಿರುಕುಳ ನೀಡಿದ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ.
ಈ ಘಟನೆ ಮೇ 12 ರ ರಾತ್ರಿ ಭಾಂಡಪ್ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ರೋಹಿತ್ ಲಾವಾರೆ ಎಂದು ಗುರುತಿಸಲಾದ ಡೆಲಿವರಿ ಏಜೆಂಟ್ ಘಟನೆಯ ಸಂಪೂರ್ಣ ದೃಶ್ಯವನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವೀಡಿಯೊದಲ್ಲಿ, ಗ್ರಾಹಕರು ಲಾವಾರೆ ಮರಾಠಿ ಮಾತನಾಡಿದರೆ ಮಾತ್ರ ಹಣ ನೀಡುತ್ತೇವೆ ಎಂದು ಹೇಳುವುದನ್ನು ಕೇಳಬಹುದು.
ಮಾತಿಗೆ ಮಾತು ಬೆಳೆದ ಬಳಿಕ ಲಾವೆರೆಯವರು ಇದು ಯಾವ ರೀತಿಯ ಒತ್ತಡ ಎಂದು ಪ್ರಶ್ನಿಸಿದ್ದಾರೆ. ವಿಷಯ ಉಲ್ಬಣಗೊಳ್ಳುತ್ತಿದ್ದಂತೆ, ಮಹಿಳೆಯ ಪತಿ ಬಾಗಿಲು ಮುಚ್ಚಲು ಪ್ರಯತ್ನಿಸಿದರು, ಆದರೆ ಮಹಿಳೆ ಮಧ್ಯಪ್ರವೇಶಿಸಿ ವಿತರಣಾ ಏಜೆಂಟ್ ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಈ ವೇಳೆ ಲಾವರೆ, ಆಹಾರ ಕೆಟ್ಟದಾಗಿದೆಯೇ ಎಂದು ದಂಪತಿಗೆ ಕೇಳಿದ್ದಾರೆ.