ಮ್ಯಾನ್ಮಾರ್‌ನಲ್ಲಿ ನಕಲಿ ಉದ್ಯೋಗ ಆಮಿಷಕ್ಕೆ ಬಲಿಯಾಗಿದ್ದ 283 ಭಾರತೀಯ ಪ್ರಜೆಗಳನ್ನು ರಕ್ಷಿಸಿ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಿ ಥೈಲ್ಯಾಂಡ್‌ನ ಮೇ ಸೋಟ್‌ನಿಂದ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದ ಮೂಲಕ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ನಕಲಿ ಉದ್ಯೋಗದ ಆಫರ್‌ಗಳ ಮೂಲಕ ಮ್ಯಾನ್ಮಾರ್ ಸೇರಿದಂತೆ ವಿವಿಧ ಆಗ್ನೇಯ ಏಷ್ಯಾದ ದೇಶಗಳಿಗೆ ಆಮಿಷವೊಡ್ಡಲಾಗಿತ್ತು. ಇದನ್ನ ನಂಬಿದ 400ಕ್ಕೂ ಹೆಚ್ಚು ಜನರು ಕೆಲಸಕ್ಕಾಗಿ ಹೋಗಿದ್ದಾರೆ. ಈ ವೇಳೆ ಅವರನ್ನು ಸೈಬರ್ ಅಪರಾಧ ಮತ್ತು ಇತರ ವಂಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಲಾಗಿತ್ತು ಎನ್ನಲಾಗಿದೆ.
ಇದೀಗ ಒಂದು 283 ಜನರ ಬ್ಯಾಚ್ ಅನ್ನು ಕಳುಹಿಸಲಾಗಿದ್ದು, ಅದರಲ್ಲಿ 266 ಪುರುಷರು ಮತ್ತು 17 ಮಹಿಳೆಯರು ಇದ್ದರೂ ಎಂದು ಎಂಇಎ ತಿಳಿಸಿದೆ. ಇನ್ನು ಎರಡನೇ ಬ್ಯಾಚ್ ನ 240 ಜನರನ್ನು ಇಂದು ತವರಿಗೆ ಕರೆತರುವ ಸಾಧ್ಯತೆ ಎನ್ನಲಾಗಿದೆ.
ಇನ್ನುಸ್ಥಳಾಂತರಿಸಲ್ಪಟ್ಟವರು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಯುಪಿ ಮತ್ತು ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಸೇರಿದವರು ಎನ್ನಲಾಗಿದೆ.