ನವದೆಹಲಿ: ಪುರುಷನೊಬ್ಬನ ಅಕ್ರಮ ಸಂಬಂಧ ಕ್ರೌರ್ಯ ಅಲ್ಲ, ಅದು ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.ಮದುವೆಯಾದ 5 ವರ್ಷದ ಬಳಿಕ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪತ್ನಿಯ ಅಸಹಜ ಸಾವಿನ ನಂತರ ಪತಿಯ ವಿರುದ್ಧ ದೂರು ದಾಖಲಾಗಿತ್ತು.
ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಜೊತೆಗೆ ಸೆಕ್ಷನ್ 498A (ಕ್ರೌರ್ಯ), 304-B (ವರದಕ್ಷಿಣೆ ಸಾವು) ಅಡಿಯಲ್ಲಿ ಕೇಸ್ ಹಾಕಲಾಗಿತ್ತು.
ಅರ್ಜಿದಾರರು ಮೃತ ಮಹಿಳೆಯ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸಾಬೀತುಪಡಿಸಲು, ಕೆಲವು ವೀಡಿಯೊಗಳು ಮತ್ತು ಚಾಟ್ ದಾಖಲೆಗಳನ್ನು ಕೂಡ ನೀಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಸ್ಟೀಸ್ ಸಂಜೀವ್ ನರುಲಾ, ಪುರುಷನೊಬ್ಬನ ಅಕ್ರಮ ಸಂಬಂಧ ಕ್ರೌರ್ಯ ಅಲ್ಲ, ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ. ಅಕ್ರಮ ಸಂಬಂಧಕ್ಕೂ ಮೃತಳ ಮೇಲೆ ನಡೆದಿದೆ ಎನ್ನಲಾದ ಕಿರುಕುಳ ಅಥವಾ ಹಿಂಸೆಗೂ ಸಂಬಂಧ ಇಲ್ಲ ಎಂದು ಹೇಳಿ ಜಾಮೀನು ನೀಡಿದ್ದಾರೆ. ಜೊತೆಗೆ 50000 ಸಾವಿರ ರೂಪಾಯಿಯ ಬಾಂಡ್, ಇಬ್ಬರ ಶ್ಯೂರಿಟಿಗಳ ಮೇಲೆ ಬಿಡುಗಡೆ ಮಾಡಲು ಕೋರ್ಟ್ ಸೂಚಿಸಿದೆ.