ಹುಬ್ಬಳ್ಳಿ: ಗಂಡ ಕುಡಿದು ಬಂದು ಹೊಡಿತಾನೆ ಅಂತಾನೋ.. ಹಿಂಸೆ ಕೊಡ್ತಾನೆ ಅಂತನೋ ಪತ್ನಿಯರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಪೊಲೀಸಪ್ಪನ ಮುಂದೆ ಕಣ್ಣೀರು ಹಾಕುತ್ತಾ ಅಂಗಲಾಚುವ ಪ್ರಕರಣಗಳನ್ನು ಗಮನಿಸಿರ್ತೀರಾ..ಆದ್ರೆ ಈ ಕೇಸ್ ನಲ್ಲಿ ಎಲ್ಲವೂ ಉಲ್ಟಾ..!
ಹುಬ್ಬಳ್ಳಿಯಲ್ಲಿ ಗಂಡ ಹೆಂಡತಿಯ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಒಂದ್ಕಡೆ ಗಂಡ ಕಿರುಕುಳ ಕೊಡ್ತಾನೆ ಅಂತ ಪತ್ನಿ ದೂರು ದಾಖಲಿಸಿದ್ರೆ,ಇತ್ತ ಪತ್ನಿ ಹೊಡೆಯುತ್ತಾಳೆ ಸಾರ್ ಅಂತ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಎದುರು ಪತಿ ಕಣ್ಣೀರಿಟ್ಟ ಘಟನೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅಯ್ಯೋ ನನ್ನ ಗಂಡ ವರದಕ್ಷಿಣೆ ಕಿರುಕುಳ ಕೊಡ್ತಾನೆ ಅಂತ ಪೊಲೀಸರ ಎದುರು ಪತ್ನಿ ಕಣ್ಣೀರು ಹಾಕಿದ್ರೆ ಇನ್ನೊಂದೆಡೆ ಪತ್ನಿ ದಿನಂಪ್ರತಿ ನನ್ನ ಹೊಡೆಯುತ್ತಾಳೆ ಅಂತ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮುಂದೆ ಪತಿ ಕಣ್ಣೀರು ಹಾಕಿ ಕಷ್ಟ ಹೇಳಿಕೊಂಡಿದ್ದಾನೆ.ಈ ವೇಳೆ ಖುದ್ದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವ್ಯಕ್ತಿಯನ್ನು ಸಮಧಾನ ಪಡಿಸಿದ್ದಾರೆ.