ದಾವಣಗೆರೆ : ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಜೋರಿದೆ. ವಿಜಯೇಂದ್ರ ಹಾಗೂ ಯತ್ನಾಳ್ ನಡುವೆ ದೊಡ್ಡ ಸಮರವೇ ನಡೆಯುತ್ತಿದೆ. ಈ ನಡುವೆ ರೇಣುಕಾಚಾರ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾತಾಡಿದ ಅವರು,ಹಾದಿ ಬೀದಿಯಲ್ಲಿ ಹಂದಿಗಳು ಹೇಳುತ್ತವೇ ಅಂದರೆ ಅವರಿಗೆ ನಾನೇಕೆ ಉತ್ತರ ನೀಡಲಿ?ದಾವಣಗೆರೆಯಲ್ಲಿ ಎರಡು ಹಂದಿಗಳು ಇವೆ, ಶಿವಾನಂದ ಸರ್ಕಲ್‌ನಲ್ಲಿ ವಿಜಯೇಂದ್ರ ಮನೆ ಮುಂದೆ ನೀವು ನಿಲ್ಲಿ ಅವರ ಗುಣಗಾನ ಮಾಡಿ ಎಂದು ಕಿಡಿಕಾರಿದರು . ಯತ್ನಾಳ್‌ಗೆ ಅಪಮಾನ ಖಚಿತ, ರಾಷ್ಟ್ರೀಯ ನಾಯಕರು ಭೇಟಿಯಾಗಿಲ್ಲ ಎಂದು ಸುದ್ಧಿ ಬಿತ್ತರಿಸುತ್ತೀರಿ ಎಂದು ಮಾದ್ಯಮಗಳ ಮೇಲೆ ಸಹ ಆಕ್ರೋಶ ಹೊರಹಾಕಿದರು
ನನಗೆ ಎಷ್ಟು ಅಪಮಾನ ಆಗಿದೆ ಎಂದರೆ ಬೇರೆಯಾವರು ಯಾರಾದರೂ ನನ್ನ ಜಾಗದಲ್ಲಿ ಇದ್ದದ್ರೆ ನೇಣು ಹಾಕಿಕೊಳ್ಳಬೇಕಿತ್ತು, ನಾವು ಹಾಕಿಕೊಂಡಿಲ್ಲ. ಮಾಧ್ಯಮಗಳಲ್ಲಿ ವಿಜಯೇಂದ್ರ ಪರವಾಗಿ ವರದಿಗಳು ಬರ್ತಾ ಇದೆ. ನಮ್ಮ ವಿರುದ್ದ ವರದಿಗಳು ಬರ್ತಾ ಇದೆ ಎಂದು ಕೋಪ ಹೊರಹಾಕಿದರು.
ಕುಟುಂಬ ರಾಜಕಾರಣದ ವಿರುದ್ದ ನಾವು ಇದ್ದೇವೆ. ನಾನು ರಾಜ್ಯಾಧ್ಯಕ್ಷ ಹಾಗೂ ಸಿಎಂ ಆಗುತ್ತೇನೆ. ನಾನು ಕೂಡ ಅರ್ಹನಿದ್ದೇನೆ ಎಂದು ಯತ್ನಾಳ್ ಹೇಳಿದರು.