ಚಿಕ್ಕೋಡಿ : ಈಗ ಎಲ್ಲೆಲ್ಲೂ ಐಪಿಎಲ್ ಹವಾ.. ಚುಟುಕು ಕ್ರಿಕೆಟ್ ನಲ್ಲಿ ಭಾಗವಹಿಸಿ ಮಿಂಚಬೇಕು ಅನ್ನೋದು ಕ್ರಿಕೆಟರ್ ಗಳ ಅಸೆ. ಆದ್ರೆ ಈಗ ಅದೇ ವಿಚಾರದಲ್ಲಿ ಲಕ್ಷ ಲಕ್ಷ ವಂಚಿಸಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್ ವಂಚಕರು 24 ಲಕ್ಷ ರೂ.ವಂಚಿಸಿರುವುದು ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡೂರು (19) ವಂಚನೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದ ಯುವಕನನ್ನು, ವಂಚಕರು ಇನ್ಸ್ಟಾಗ್ರಾಮ್‌ನಲ್ಲಿ ಸಂಪರ್ಕಿಸಿದ್ದಾರೆ. ರಾಜಸ್ಥಾನ ತಂಡಕ್ಕೆ ಸೇರಿಸುತ್ತೇವೆ ಎಂದು ನಂಬಿಸಿದ್ದಾರೆ.
ತಂಡಕ್ಕೆ ಸೇರಿಸಲು, 24 ಲಕ್ಷ ರೂ. ನೀಡುವಂತೆ ಯುವಕನಿಗೆ ವಂಚಕರು ಹೇಳಿದ್ದರು. ಇದನ್ನು ನಂಬಿ ರಾಕೇಶ್ ದುಡ್ಡು ಕೊಟ್ಟಿದ್ದು, ಇದೀಗ ವಂಚಕರು ಪಂಗನಾಮ ಹಾಕಿದ್ದಾರೆ.ಈ ಸಂಬಂಧ ಬೆಳಗಾವಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.