ಜಮ್ಮು ಮತ್ತು ಕಾಶ್ಮೀರ : ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರ ಸಂಘಟನೆಗೆ ಸಂಪರ್ಕ ಹೊಂದಿರುವ ಮೂವರು ಭಯೋತ್ಪಾದಕರನ್ನು ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತರು ಮುಜಾಮಿಲ್ ಅಹ್ಮದ್, ಇಷ್ಫಾಕ್ ಪಂಡಿತ್ ಮತ್ತು ಮುನೀರ್ ಅಹ್ಮದ್ ಎಂದು ತಿಳಿದುಬಂದಿದೆ.ಉಗ್ರ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಅಲ್ಲದೇ ಸ್ಥಳೀಯರನ್ನು ಭಯೋತ್ಪಾದನೆಗೆ ಸೇರುವಂತೆ ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪಿಸ್ತೂಲ್ ಮತ್ತು ಹ್ಯಾಂಡ್ ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು 2020ರಲ್ಲಿ ಪಾಕಿಸ್ತಾನಕ್ಕೆ ಪರಾರಿಯಾಗಿ ನಂತರ ಆ ಉಗ್ರ ಸೇರಿ ಸಕ್ರಿಯ ಎಲ್‌ಇಟಿ ಭಯೋತ್ಪಾದಕ ಆಬಿದ್ ಖಯೂಮ್ ಲೋನ್ ಎಂಬುವವನೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಒಂದೆಡೆ ಜಮ್ಮು ಕಾಶ್ಮೀರದಲ್ಲಿ ಉಗ್ರರಿಗಾಗಿ ಭದ್ರತಾ ಪಡೆಗಳು ಶೋಧ ಮುಂದುವರಿಸಿದ್ದು, ನಿನ್ನೆಯಷ್ಟೇ ಮೂವರು ಭಯೋತ್ಪಾದಕರನ್ನು ಹೊಸಕಿಹಾಕಲಾಗಿತ್ತು.